ಹಾಸನ: ಭೀಮಾ ಹಾಗೂ ಕ್ಯಾಪ್ಟನ್ ಫೈಟ್ ನಡುವೆ ನಡೆದ ಕಾಳಗದಲ್ಲಿ ಭೀಮ ಒಂದು ದಂತ ಕಳೆದುಕೊಂಡಿದ್ದಾನೆ. ಎರಡು ಆನೆಗಳ ನಡುವೆ ಬೇಲೂರು ತಾಲ್ಲೂಕಿನ ಜಗಬೋರನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮದದಲ್ಲಿದ್ದ ಎರಡು ದೈತ್ಯಾಕಾರದ ಕಾಡಾನೆಗಳ ಮಧ್ಯೆ ಭೀಕರ ಕಾಳಗವಾಗಿದೆ.
ಕಾಳಗದ ವೇಳೆ ಸಿಟ್ಟಿನಲ್ಲಿ ಭೀಮಾ ಮರಕ್ಕೆ ಗುದ್ದಿದ್ದಾನೆ. ಗುದ್ದಿದ ರಭಸಕ್ಕೆ ಭೀಮನ ಒಂದು ದಂತ ಮುರಿದು ಬಿದ್ದಿದೆ.
ಇನ್ನೂ ದಂತ ತುಂಡಾಗಿ ನೋವಿನಲ್ಲಿ ಒಂಟಿಸಲಗ ಭೀಮಾ ಘೀಳಿಡುತ್ತಿದ್ದು, ಭೀಮನ ಸೊಂಡಿಲಿನ ಬಳಿ ರಕ್ತ ಸುರಿಯುತ್ತಿದೆ.
ಕಾಫಿ ತೋಟದಲ್ಲಿ ನಿಂತು ಭೀಮಾ ನರಳಾಡಿದ. ಕಾಳಗದಲ್ಲಿ ಕ್ಯಾಪ್ಟನ್‌ಗೂ ಗಂಭೀರ ಸ್ವರೂಪದ ಗಾಯಗಳಾಗಿವೆ. ಕಾಡಾನೆ ಭೀಮಾ ಮಲೆನಾಡು ಭಾಗದ ಜನರ ಪ್ರೀತಿ ಪಾತ್ರವಾಗಿದ್ದಾನೆ. ದಂತ ಮುರಿದುಕೊಂಡಿದ್ದನ್ನು ಕಂಡು ಜನರು ಮರುಕಪಟ್ಟಿದ್ದಾರೆ.