Publish Date: Tue, 07 May 2019 (19:20 IST)
Updated Date: Tue, 07 May 2019 (19:22 IST)
ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡ ಅವರಿಗೆ 85 ನೇ ವರ್ಷದ ಜನುಮದಿನದ ಅಂಗವಾಗಿ ಅಪ್ಪಾಜಿ ಕ್ಯಾಂಟೀನ್ ಆರಂಭಗೊಳ್ಳಲಿದೆ.
ಮೇ 18 ರಂದು ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡ ಅವರಿಗೆ 85 ನೇ ವರ್ಷದ ಜನುಮದಿನ. ದೇವೇಗೌಡ ಅವರ ಜನುಮದಿನದ ಪ್ರಯುಕ್ತ ಅಪ್ಪಾಜಿ ಮೊಬೈಲ್ ಕ್ಯಾಂಟೀನ್ ಆರಂಭಿಸುವುದಾಗಿ ಶರವಣ ತಿಳಿಸಿದರು.
ಅಪ್ಪಾಜಿ ಕ್ಯಾಂಟೀನ್ ಈಗಾಗಲೇ ಯಶಸ್ವಿಯಾಗಿ ಜನಮೆಚ್ಚುಗೆ ಪಡೆದಿದೆ. ಪ್ರತಿದಿನ ಸುಮಾರು 5 ಸಾವಿರ ಜನರು ಅಪ್ಪಾಜಿ ಕ್ಯಾಂಟೀನ್ ನಲ್ಲಿ ಊಟ ಮಾಡುತ್ತಿದ್ದಾರೆ. ನಮ್ಮ ನೆಚ್ಚಿನ ನಾಯಕ ಅಪ್ಪಾಜಿ ಅವರ ಹೆಸರಿನಲ್ಲಿ ಈಗ ಮೊಬೈಲ್ ಕ್ಯಾಂಟೀನ್ ಆರಂಭಿಸಲಾಗುತ್ತಿದೆ. ಅವರ ಹುಟ್ಟುಹಬ್ಬದ ದಿನ ಪದ್ಮನಾಭನಗರದ ದೇವೇಗೌಡರ ನಿವಾಸದಲ್ಲಿ ಕ್ಯಾಂಟೀನ್ ಗೆ ಚಾಲನೆ ಸಿಗಲಿದೆ ಎಂದರು.
ದೇವೇಗೌಡರ ಮುದ್ದೆಯೂ ಸಂಚಾರಿ ಕ್ಯಾಂಟೀನ್ ನಲ್ಲಿ ಲಭ್ಯವಾಗಲಿದೆ. ಮೇ 18 ರಂದು ಆಟೋ ಸ್ಟ್ಯಾಂಡ್, ಮೆಜೆಸ್ಟಿಕ್, ಮಾರ್ಕೆಟ್ ಸೇರಿದಂತೆ ಜನಸಂದಣಿ ಹೆಚ್ಚಾಗಿರುವ ಪ್ರದೇಶಗಳಲ್ಲಿ ಈ ಕ್ಯಾಂಟೀನ್ ಸಂಚರಿಸಲಿದೆ. ಅಂದೇ ಊಟದ ದರ, ಮೆನು ಪ್ರಕಟಿಸಲಾಗುವುದು. ಹೀಗಂತ ಶರವಣ ಹೇಳಿದ್ರು.