ಬಿಜೆಪಿಯಲ್ಲಿಯೂ ಜಗದೀಶ್ ಶೆಟ್ಟರ್ ಗೆ ಸರಿ ಹೋಗ್ತಿಲ್ವಾ..?

geetha
ಶನಿವಾರ, 24 ಫೆಬ್ರವರಿ 2024 (17:20 IST)
ಹುಬ್ಬಳ್ಳಿ :ಶನಿವಾರ ಪ್ರಾರಂಭಗೊಂಡ ಪಕ್ಷದ ಕಾರ್ಯಾಲಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಪಾಲ್ಗೊಂಡಿದ್ದು, ಜಗದೀಶ್‌ ಶೆಟ್ಟರ್‌ ಕಾರ್ಯಕ್ರಮದಿಂದ ದೂರವುಳಿದಿದ್ದಾರೆ. ಅವರಿಗೆ ಬೆಂಗಳೂರಿನಲ್ಲಿ ಮಹತ್ವದ ಕೆಲಸವಿದ್ದ ಕಾರಣ ಕಾರ್ಯಕ್ರಮಕ್ಕೆ ಬಂದಿಲ್ಲಎಂದು ಪ್ರಲ್ಹಾದ್‌ ಜೋಶಿ ಸಬೂಬು ಹೇಳಿದ್ದರೂ  ಸಹ ಕಾರ್ಯಕರ್ತರ ನಡುವೆ ಈ ಬಗ್ಗೆ ಸಂಶಯ ವ್ಯಕ್ತವಾಗಿದೆ. 
 
 ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ ಸಿಗದ ಕಾರಣಕ್ಕೆ ಮುನಿಸಿಕೊಂಡು ಕಾಂಗ್ರೆಸ್‌ ಸೇರಿದ್ದ  ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಬಳಿಕ ಮತ್ತೆ ಬಿಜೆಪಿ ಸೇರಿದ್ದು, ಈಗ ಬಿಜೆಪಿಯಲ್ಲಿಯೂ ಇರಿಸುಮುರುಸು ಅನುಭವಿಸುತ್ತಿದ್ದಾರೆಯೇ ಎಂಬ ಪ್ರಶ್ನೆ ಉದ್ಭವವಾಗಿದೆ. ಬಿಜೆಪಿ ಮತ್ತು ಸಂಸದ ಪ್ರಲ್ಹಾದ್‌ ಜೋಶಿ ಜೊತೆಗಿನ ವೇದಿಕೆ ಕಾರ್ಯಕ್ರಮಗಳಲ್ಲಿ ಜಗದೀಶ್‌ ಶೆಟ್ಟರ್‌ ಕಾಣಿಸಿಕೊಳ್ಳದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. 

ಹುಬ್ಬಳ್ಳಿಯ ವಾಜಪೇಯಿ ಮತ್ತು ಅಡ್ವಾಣಿ ಜೋಡಿ ಎಂದೇ ಹೆಸರಾಗಿದ್ದ ಜಗದೀಶ್‌ ಶೆಟ್ಟರ್‌ ಮತ್ತು ಪ್ರಲ್ಹಾದ್‌ ಜೋಶಿ ಈ ಹಿಂದೆ ಅತ್ಯಾಪ್ತರಾಗಿದ್ದರು. ಆದರೆ ಜಗದೀಶ್ ಶೆಟ್ಟರ್‌ ಕಾಂಗ್ರೆಸ್‌ ಸೇರ್ಪಡೆಯಾದ ಮೇಲೆ ಇಬ್ಬರೂ ಪರಸ್ಪರರ ವಿರುದ್ದ ದೋಷಾರೋಪಣೆಯಲ್ಲಿ ತೊಡಗಿದ್ದರು. ಜಗದೀಶ್‌ ಶೆಟ್ಟರ್‌ ಬಿಜೆಪಿಗೆ ವಾಪಸಾದ ಸಂದರ್ಭದಲ್ಲೂ  ಸಹ ಪ್ರಲ್ಹಾದ್‌ ಜೋಶಿ ಪಕ್ಷ ಸೇರ್ಪಡೆ ಕಾರ್ಯಕ್ರಮದಿಂದ ದೂರವುಳಿದಿದ್ದು ಗಮನಾರ್ಹ. ಲೋಕಸಭಾ ಚುನಾವಣೆ ಮುಂದಿರುವ ಸಮಯದಲ್ಲೇ ಇವರಿಬ್ಬರ ನಡುವಿನ ಮುನಿಸು ಕಾರ್ಯಕರ್ತರ ಆತಂಕಕ್ಕೆ ಕಾರಣವಾಗಿದೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿಜೆಐ ಮೇಲೆ ಶೂ ಎಸೆದ ಪ್ರಕರಣ: ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡ ಸಿಎಂ ಸಿದ್ದರಾಮಯ್ಯ

ಇನ್ಮುಂದೆ 2ವರ್ಷದೊಳಗಿನ ಮಕ್ಕಳಿಗೆ ಪ್ರಿಸ್ಕ್ರಿಪ್ಷನ್ ಇಲ್ಲದೆ ಸಿರಪ್‌ ಇಲ್ಲ

ಸಿಎಂ ಸಿದ್ದರಾಮಯ್ಯರಿಗೆ ಶೀಘ್ರದಲ್ಲೇ ಪರಿಸರ ಸ್ನೇಹಿ ಕಾರು: ನರೇಂದ್ರ ಸ್ವಾಮಿ

ಬಿಹಾರ ಚುನಾವಣಾ ಮಹಾಕದನಕ್ಕೆ ಮುಹೂರ್ತ ಫಿಕ್ಸ್: ಎರಡು ಹಂತದಲ್ಲಿ ಮತದಾನ

ದೇಶದ ಪ್ರಮುಖ ಪ್ರಕರಣಗಳಲ್ಲಿ 2ನೇ ಸ್ಥಾನ ಪಡೆದ ಅಪರಾಧ ಪ್ರಕರಣ ಯಾವುದು ಗೊತ್ತಾ

ಮುಂದಿನ ಸುದ್ದಿ
Show comments