Publish Date: Tue, 20 Feb 2024 (15:00 IST)
Updated Date: Tue, 20 Feb 2024 (15:09 IST)
ಬೆಂಗಳೂರು :20 ವರ್ಷಗಳ ನಂತರ ರೀಲ್ಸ್ ಗಳಿಂದ ಉಪೇಂದ್ರ ಸಿನಿಮಾದ ಏನಿಲ್ಲ ಏನಿಲ್ಲ ಸಾಂಗ್ ಮತ್ತೆ ಎಲ್ಲೆಡೆ ಜನಪ್ರಿಯವಾಗಿರುವ ಸಮಯದಲ್ಲೇ ಸಿಎಂ ಸಿದ್ದರಾಮಯ್ಯ ಅವರೂ ಸಹ ಸದನದಲ್ಲಿ ಆ ಹಾಡನ್ನು ಉಲ್ಲೇಖಿಸಿದ ಘಟನೆ ಮಂಗಳವಾರ ನಡೆಯಿತು. ಕರ್ನಾಟಕ ಬಜೆಟ್ ಮಂಡನೆಯ ದಿನ ಬಿಜೆಪಿಯವರು ಪ್ರತಿಭಟನೆಯಲ್ಲಿ ಏನಿಲ್ಲಾ ಏನಿಲ್ಲಾ ಸಿದ್ದರಾಮಯ್ಯ ಬಜೆಟ್ ನಲ್ಲಿ ಏನಿಲ್ಲ ಎಂದು ಹಾಡು ಹಾಡಿ ವ್ಯಂಗ್ಯವಾಡಿದ್ದರು. ಆ ಪ್ರಕರಣವನ್ನು ಇಂದು ಸದನದಲ್ಲಿ ಉಲ್ಲೇಖಿಸಿದ ಸಿಎಂ ನೀವು ಬಜೆಟ್ ಬಗ್ಗೆ ಅರಿವನ್ನೇ ಪಡೆದಿಲ್ಲ. ಅದಕ್ಕೆ ಬದಲಾಗಿ ಏನಿಲ್ಲ ಏನಿಲ್ಲ ಎಂದು ಹಾಡು ಹೇಳಿದ್ದಿರಿ ಎಂದು ಬಿಜೆಪಿಯವರನ್ನು ಅಣಕಿಸಿದರು.
ಇದೇ ವೇಳೆ, ನೀವು ಸದನದ ಸಮಯವನ್ನು ಎಷ್ಟು ಹಾಳುಮಾಡಿದರೂ ಸರಿ. ನನ್ನನ್ನು ಎಷ್ಟು ಬಾರಿ ವಿಷಯಾಂತರಗೊಳಿಸಿದರೂ ಸರಿ. ನಾನು ಮಾತನಾಡಬೇಕಿರುವುದನ್ನು ಮಾತಾಡಿಯೇ ಆಡುತ್ತೇನೆ ಎಂದು ಸಿಎಂ ಹೇಳಿದರು.