Select Your Language

Notifications

webdunia
webdunia
webdunia
webdunia

ಕುವೆಂಪುಗೆ ಅಪಮಾನ ಮಾಡಿದವರು ನಾವಲ್ಲ ನೀವು-ವಿಜಯೇಂದ್ರ

ವಿಜಯೇಂದ್ರ

geetha

bangalore , ಸೋಮವಾರ, 19 ಫೆಬ್ರವರಿ 2024 (17:30 IST)
ಬೆಂಗಳೂರು : ಕುವೆಂಪು ಅವರ ಧ್ಯೇಯವಾಕ್ಯವನ್ನು “ ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ” ಎಂದು ತಿದ್ದುಪಡಿ ಮಾಡಲಾಗಿದೆ. ಇದು ಕುವೆಂಪು ಅವರಿಗೆ ಮಾಡಿರುವ ಅಪಮಾನ. ಇದನ್ನು ಮಾಡಲು ಸಮಾಜ ಕಲ್ಯಾಣ ಇಲಾಖೆಯ ಮುಖ್ಯಕಾರ್ಯದರ್ಶಿಗೆ ಅಧಿಕಾರ ನೀಡಿದವರು ಯಾರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪ್ರಶ್ನಿಸಿದರು. ವಸತಿ ಶಾಲೆಗಳಲ್ಲಿ ಅಳವಡಿಸಲಾಗಿರುವ ರಾಷ್ಟ್ರಕವಿ ಕುವೆಂಪು ಅವರ “ಜ್ಞಾನದೇಗುಲವಿದು ಕೈಮುಗಿದು ಒಳಗೆ ಬಾ” ಎಂಬ ವಾಕ್ಯವನ್ನು ತಿದ್ದುಪಡಿ ಮಾಡಿರುವ ವಿಷಯ ಸೋಮವಾರ ಅಧಿವೇಶನದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷದ ನಡುವೆ ವಾಗ್ಯುದ್ಧಕ್ಕೆ ಕಾರಣವಾಯಿತು.

ಸಭಾಪತಿ ಯು.ಟಿ.ಖಾದರ್‌ ಇದಕ್ಕೆ ಉತ್ತರಿಸಿ, ಸಮಾಜ ಕಲ್ಯಾಣ ಇಲಾಖೆ ಸಚಿವರು ಇದಕ್ಕೆ ನಾಳೆ ಉತ್ತರ ನೀಡಲಿದ್ದಾರೆ ಎಂದರೂ ಬಿಜೆಪಿಯವರಿಗೆ ಸಮಾಧಾನವಾಗಲಿಲ್ಲ. ಈ ವೇಳೆ ಎದ್ದು ನಿಂತ ಸಚಿವ ಕೃಷ್ಣ ಬೈರೇಗೌಡ, ಕುವೆಂಪು ಅವರ ಪಠ್ಯವನ್ನೇ ಪಠ್ಯಪುಸ್ತಕದಿಂದ ತೆಗೆದವರು ನೀವು ಜಾಡಿಸಿದರು. ಇದಕ್ಕೆ ಬಿಜೆಪಿಯವರು ಕೆರಳಿ ಕೆಂಡಾಮಂಡಲವಾಗಿ ವಾಗ್ಬಾಣಗಳನ್ನು ತೂರಲಾರಂಭಿಸಿದ ಕಾರಣ ಸದನದಲ್ಲಿ ಕೆಲಕಾಲ ಕೋಲಾಹಲ ಉಂಟಾಯ್ತು. ಕೊನೆಗೆ ಯು.ಟಿ.ಖಾದರ್‌ ನಾಳೆ ಉತ್ತರ ಸಿಗಲಿದೆ ಎಂದು ಉಭಯ ಪಕ್ಷದವರನ್ನೂ ಸಮಧಾನ ಪಡಿಸಿ ಚರ್ಚೆಗೆ ಮಂಗಳ ಹಾಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಮಂಡ್ಯದಿಂದಲೇ ಡಾ.ಮಂಜುನಾಥ್ ಸ್ಪರ್ಧಿಸಿದರೆ ಸುಮಲತಾ ಕತೆಯೇನು