Select Your Language

Notifications

webdunia
webdunia
webdunia
webdunia

ದೇವಾಲಯಗಳೇಕೆ ಕೊಡಬೇಕು 10% ಕಪ್ಪ? ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಸಿಡಿದೆದ್ದ ಬಿಜೆಪಿ

Siddaramaiah-Vijayendra

Krishnaveni K

ಬೆಂಗಳೂರು , ಗುರುವಾರ, 22 ಫೆಬ್ರವರಿ 2024 (09:10 IST)
Photo Courtesy: Twitter
ಬೆಂಗಳೂರು: ಹಿಂದೂ ದೇವಾಲಯಗಳಿಗೆ 10% ತೆರಿಗೆ ವಿಧಿಸುವ ಹೊಸ ಬಿಲ್ ಪಾಸ್ ಮಾಡಿದ ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷ ಬಿಜೆಪಿ ತಿರುಗಿಬಿದ್ದಿದೆ. ಇದು ಹಿಂದೂ ವಿರೋಧಿ ಸರ್ಕಾರ ಎಂದು ವಾಗ್ದಾಳಿ ನಡೆಸಿದೆ.

ನಿನ್ನೆ ಅಧಿವೇಶನದಲ್ಲಿ ‘ಕರ್ನಾಟಕ ಹಿಂದೂ ಧರ್ಮ ಸಂಸ್ಥೆಗಳು ಮತ್ತು ದತ್ತಿ ಸಂಸ್ಥೆಗಳ ಮಸೂದೆ 2024’ ರನ್ನು ಪಾಸ್ ಮಾಡಲಾಯಿತು. ಅದರಂತೆ ದೇವಾಲಯಗಳ ಆದಾಯದಿಂದ ಶೇ.10 ರಷ್ಟು ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ಪಾವತಿಸಬೇಕು ಎಂಬ ನಿಯಮ ಜಾರಿಗೊಳಿಸಲಾಯಿತು. ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ಯತೀಂದ್ರ, ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಬಿಜೆಪಿ ನಾಯಕರು ಕಿಡಿ ಕಾರಿದರು.

ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿರುವ ಬಿವೈ ವಿಜಯೇಂದ್ರ ‘ಈ ಸರ್ಕಾರ ಹಿಂದೂ ವಿರೋಧಿ ಸರ್ಕಾರ ಎಂದು ಮತ್ತೊಮ್ಮೆ ಸಾಬೀತಾಗಿದೆ. ತನ್ನ ಬರಿದಾದ ಖಜಾನೆ ತುಂಬಿಸಲು ಹಿಂದೂ ದೇವಾಲಯಗಳು ಮತ್ತು ಧಾರ್ಮಿಕ ಸಂಸ್ಥೆಗಳ ಆದಾಯಕ್ಕೆ ಕೈ ಹಾಕಿದೆ. ಹಿಂದೂ ದೇವಾಲಯಗಳ ಹಣವನ್ನು ಬೇರೆ ಉದ್ದೇಶಕ್ಕೆ ಬಳಸಲಾಗುತ್ತದೆ. ಭಕ್ತರು ದೇವಾಲಯದ ಅಭಿವೃದ್ಧಿಗೆ ಎಂದು ನೀಡುವ ಹಣವನ್ನು ದೇವಾಲಯಗಳ ಅಭಿವೃದ್ಧಿಗೆ ಬಳಸಬೇಕು. ಇದನ್ನು ಬೇರೆ ಉದ್ದೇಶಕ್ಕೆ ಬಳಸಿದರೆ ಭಕ್ತರ ಭಾವನೆಗೆ ಧಕ್ಕೆ ತಂದಂತೆ. ಇದರಿಂದ ಹಿಂಸೆ ಮತ್ತು ವಂಚನೆ ಹೆಚ್ಚಾಗುತ್ತದೆ’ ಎಂದು ಕಿಡಿ ಕಾರಿದ್ದಾರೆ.

ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೂಡಾ ಸದನದಲ್ಲಿ ಆಡಳಿತಾರೂಢ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸರ್ಕಾರಕ್ಕೆ ಕೇವಲ ಹಿಂದೂ ದೇವಾಲಯಗಳ ಆದಾಯ ಮಾತ್ರ ಯಾಕೆ ಕಾಣುತ್ತಿದೆ? ಕ್ರಿಶ್ಚಿಯನ್ ಮತ್ತು ಮುಸ್ಲಿಂ ಧಾರ್ಮಿಕ ಕೇಂದ್ರಗಳನ್ನು ಮತ್ತು ಅವರ ಆದಾಯಗಳನ್ನು ಅವರ ಪಾಡಿಗೆ ಬಿಟ್ಟಿರುವಾಗ ಹಿಂದೂ ದೇವಾಲಯ ಮತ್ತು ಆದಾಯವನ್ನು ಮಾತ್ರ ಸರ್ಕಾರ ನಿಯಂತ್ರಿಸುವುದು ಯಾಕೆ? ಹಿಂದೂ ದೇವಾಲಯಗಳನ್ನೂ ಅದರ ಪಾಡಿಗೆ ಬಿಟ್ಟು ಬಿಡಿ. ದೇವಾಲಯಗಳ ಹಣ ದೇವಾಲಯಗಳ ಅಭಿವೃದ್ಧಿಗೆ ಬಳಕೆಯಾಗಲಿ. ಆಗಲೇ ನಿಜವಾದ ಜಾತ್ಯಾತೀತೆ ಉಳಿಯುವುದು. ನಮ್ಮ ಹಿಂದೂ ದೇವಾಲಯಗಳ ಹಣ ತೆಗೆದುಕೊಂಡು ಹೋಗಿ ಬೇರೆ ಸಮುದಾಯದ ಅಭಿವೃದ್ಧಿಗೆ ನೀಡುವುದು ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ.

ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ, ಈ ವಿಚಾರದಲ್ಲಿ ಬಿಜೆಪಿ ವೃಥಾ ರಾಜಕೀಯ ಮಾಡುತ್ತಿದೆ. ರಾಜಕೀಯಕ್ಕೆ ಧರ್ಮ ಬೆರೆಸಬಾರದು. ನಿಜವಾದ ಹಿಂದುತ್ವವನ್ನು ಬೆಳೆಸುತ್ತಿರುವುದು ಕಾಂಗ್ರೆಸ್ ಎಂದು ಪ್ರತ್ಯಾರೋಪ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗುರಾಯಿಸಿದವನ ಕಾಲ ಮೇಲೆ ಕಲ್ಲು ಎತ್ತಿ ಹಾಕಿದ ತುಕಾಲಿ ರೌಡಿಗಳು