Select Your Language

Notifications

webdunia
webdunia
webdunia
webdunia

ಬಿಜೆಪಿ ನಾಯಕರು ತಮ್ಮ ಮಕ್ಳ ಕೈಗೆ ದೊಣ್ಣೆ, ಲಾಂಗು ಕೊಟ್ಟು ಬೀದಿಗೆ ಬಿಡುತ್ತಾರಾ

Priyanka Kharge

Sampriya

ಬೆಂಗಳೂರು , ಸೋಮವಾರ, 15 ಸೆಪ್ಟಂಬರ್ 2025 (16:03 IST)
ಬೆಂಗಳೂರು: ಬಡವರ ಮನೆ ಮಕ್ಕಳನ್ನು ಬಾವಿಗೆ ತಳ್ಳಿ ರಾಜಕೀಯದ ಆಳ ನೋಡುವ ಬದಲು ಬಿಜೆಪಿ ನಾಯಕರು ತಮ್ಮ ಮಕ್ಕಳಿಗೆ ಕೇಸರಿ ಶಾಲು, ಕೈಗೆ ದೊಣ್ಣೆ ಕೊಟ್ಟು ಧರ್ಮ ರಕ್ಷಣೆಗೆ ಕಳುಹಿಸುತ್ತಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನೆ ಮಾಡಿದ್ದಾರೆ. 

ಅವರು ತಮ್ಮ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಸಂಬಂಧ ಬರೆದುಕೊಂಡಿದ್ದಾರೆ. 

“ತಲೆ ತೆಗೆಯಿರಿ, ತೊಡೆ ಮುರಿಯಿರಿ“ ಎನ್ನುತ್ತಿರುವ ಬಿಜೆಪಿ ನಾಯಕರು ತಮ್ಮ ಮಕ್ಕಳ ಕೈಗೆ ದೊಣ್ಣೆ, ಲಾಂಗು ಮಚ್ಚುಗಳನ್ನು ಕೊಟ್ಟು ಬೀದಿಗೆ ಬಿಡುತ್ತಾರೆಯೇ?


ಬಿಜೆಪಿ ನಾಯಕರು ತಮ್ಮ ಮಕ್ಕಳಿಗೆ ಕೇಸರಿ ಶಾಲು ಹೊದಿಸಿ ಗೊರಕ್ಷಣೆಗೆ, ಧರ್ಮ ರಕ್ಷಣೆಗೆ ಕಳಿಸುತ್ತಾರಾ?

ಬಡವರ ಮನೆ ಮಕ್ಕಳನ್ನು ಬಾವಿಗೆ ತಳ್ಳಿ ರಾಜಕೀಯದ ಆಳ ನೋಡುವ ಬದಲು ತಮ್ಮ ಮಕ್ಕಳ ಹೆಗಲಿಗೆ ಕೇಸರಿ ಶಾಲು, ಕೈಗೆ ದೊಣ್ಣೆ ಮಚ್ಚು ಕೊಟ್ಟು ಧರ್ಮ ರಕ್ಷಣೆಯ ಕೈಂಕರ್ಯಕ್ಕೆ ಬಿಡಬೇಕು.

ಬಿಜೆಪಿ ನಾಯಕರು ಧರ್ಮರಕ್ಷಣೆಯ ಬೋಧನೆ, ಪ್ರಚೋದನೆಗಳನ್ನು ತಮ್ಮ ಮನೆಯಿಂದಲೇ ಶುರು ಮಾಡಲಿ, ತಮ್ಮ ಮಕ್ಕಳಿಗೆ ತ್ರಿಶೂಲ ದೀಕ್ಷೆ ಕೊಡಲಿ, ಕೈಗೆ ದೊಣ್ಣೆ ಕೊಡಲಿ.

ಹಿಂದೂಗಳು ಹೆಚ್ಚು ಮಕ್ಕಳನ್ನು ಹೆರಬೇಕು ಎಂಬ RSS ಫಾರ್ಮಾನನ್ನು ಯಾವ ಬಿಜೆಪಿಗರು ಪಾಲನೆ ಮಾಡಲು ಮುಂದಾಗಿದ್ದಾರೆ?
ಮಕ್ಕಳು ಹೆರುವುದರ ಹೊರೆಯೂ ಬಡವರಿಗೆ ಮಾತ್ರವೇ? ಬಿಜೆಪಿಗರಿಗೂ ಅನ್ವಯಿಸುತ್ತದೆಯೇ?

ಅಮಾಯಕ ಹಿಂದೂ ಕಾರ್ಯಕರ್ತರು ಬಿಜೆಪಿ ನಾಯಕರೆದುರು ”ತಲೆ ತೆಗೆಯುವ ಕೆಲಸಕ್ಕೆ ನಿಮ್ಮ ಮಕ್ಕಳು ಮುಂದಿರಲಿ, ನಾವು ಅವರ ಹಿಂದೆ ಇರುತ್ತೇವೆ“ ಎಂಬ ಒಂದೇ ಒಂದು ಬೇಡಿಕೆ ಮುಂದಿಡಲಿ.

ಬಿಜೆಪಿ ನಾಯಕರ ಅಸಲಿತ ಬಂಡವಾಳವನ್ನು ಕಾಣಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

3 ಮೋಸ್ಟ್‌ ವಾಟೆಂಡ್ ನಕ್ಸಲರನ್ನು ಹೊಡೆದುರುಳಿಸಿದ ಸಿಆರ್‌ಪಿಎಫ್‌, ಜಾರ್ಖಂಡ್‌ ಪೊಲೀಸ್