Select Your Language

Notifications

webdunia
webdunia
webdunia
webdunia

ಬಿಜೆಪಿಗರಿಗಿರುವುದು ಬರೀ ಮರೆವಲ್ಲ, ಜಾಣ ಮರೆವು: ಪ್ರಿಯಾಂಕ್‌ ಖರ್ಗೆ ಹೀಗ್ಯಾಕೆ ಹೇಳಿದ್ದು

ಬ್ಯಾಲೆಟ್ ಪೇಪರ್ ಚುನಾವಣೆ

Sampriya

ನವದೆಹಲಿ , ಸೋಮವಾರ, 8 ಸೆಪ್ಟಂಬರ್ 2025 (17:56 IST)
Photo Credit X
ನವದೆಹಲಿ: ಬ್ಯಾಲೆಟ್ ಪೇಪರ್ ಮಾದರಿಯ ಚುನಾವಣಾ ಕ್ರಮವನ್ನು ವಿರೋಧಿಸುತ್ತಿರುವ ಬಿಜೆಪಿಯೇ ಹಿಂದೆ ಇವಿಎಂ ವಿರೋಧಿಸಿ ಬ್ಯಾಲೆಟ್ ಪೇಪರ್ ಪರ ವಹಿಸಿತ್ತು ಎಂಬ ವಿಷಯವನ್ನು ಮರೆತಿರುವಂತಿದೆ. ಬಿಜೆಪಿಗರಿಗಿರುವುದು ಬರೀ ಮರೆವಲ್ಲ, ಜಾಣ ಮರೆವು ಎಂದು ಸಚಿವ ಪ್ರಿಯಾಂಕ ಖರ್ಗೆ ವ್ಯಂಗ್ಯ ಮಾಡಿದ್ದಾರೆ.

ಈ ವಿಚಾರವಾಗಿ ಅವರು ತಮ್ಮ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.  ಇವಿಎಂ ಬಗ್ಗೆ ಅಪಸ್ವರ ಎತ್ತಿರುವ ಬಿಜೆಪಿ ನಾಯಕರಿಗೆ
 ನಾಯಕರಿಗೆ ನೆನಪಿಸಲು ಬಯಸುತ್ತೇನೆ. 

ಇವಿಎಂ ಯಂತ್ರಗಳು ಸಂವಿಧಾನ ವಿರೋಧಿ ಮಾತ್ರವಲ್ಲ ದುರ್ಬಳಕೆಗೆ ದಾರಿ ಮಾಡಿಕೊಡುತ್ತವೆ ಎಂದು ಪುಸ್ತಕ ಬರೆದವರು ಬಿಜೆಪಿ ಪಕ್ಷದ ಸುಬ್ರಮಣ್ಯಸ್ವಾಮಿ ಮತ್ತು ಕಲ್ಯಾಣರಾಮನ್.

ಇವಿಎಂಗಳನ್ನು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಎಂದು “ಡೆಮಾಕ್ರಸಿ ಅಟ್ ರಿಸ್ಕ್“ ಎಂಬ ಪುಸ್ತಕ ಬರೆದವರು ಬಿಜೆಪಿ ಮಾಜಿ ರಾಜ್ಯಸಭಾ ಸದಸ್ಯ ಹಾಗೂ ವಕ್ತಾರ ಜಿವಿಎಲ್ ನರಸಿಂಹರಾವ್.

ಇವಿಎಂಗಳನ್ನು ಕಟುವಾಗಿ ವಿರೋಧಿಸಿದ ಬಿಜೆಪಿಯ ಉನ್ನತ ನಾಯಕ ಎಲ್. ಕೆ ಅಡ್ವಾಣಿ ಡೆಮಾಕ್ರಸಿ ಅಟ್ ರಿಸ್ಕ್ ಪುಸ್ತಕಕ್ಕೆ ಮುನ್ನುಡಿ ಬರೆದಿದ್ದರು.

ಇವಿಎಂ ಬಗೆಗಿನ ಬಿಜೆಪಿ ನಾಯಕರಿಗೆ ಹುಟ್ಟಿದ ಈ ಅನುಮಾನಗಳನ್ನು ಬಗೆಹರಿಸುವ ಸಲುವಾಗಿಯೇ ಜಗತ್ತಿನ ನಾಲ್ಕನೇ ತಂತ್ರಜ್ಞಾನದ ಕೇಂದ್ರವೆನಿಸಿಕೊಂಡಿರುವ ಬೆಂಗಳೂರಿನಲ್ಲಿ ಎಥಿಕಲ್ ಇವಿಎಂ ಹ್ಯಾಕಥಾನ್ ನಡೆಸುವಂತೆ ಚುನಾವಣಾ ಆಯೋಗಕ್ಕೆ ಈ ಹಿಂದೆ ನಾನು ಪತ್ರ ಬರೆದಿದ್ದೆ, ಇದುವರೆಗೂ ನನ್ನ ಪತ್ರಕ್ಕೆ ಉತ್ತರ ನೀಡಿಲ್ಲ, 
ಎಥಿಕಲ್ ಹ್ಯಾಕಥಾನ್ ನಡೆಸುವ ಧೈರ್ಯವನ್ನೂ ತೋರಿಸಿಲ್ಲ ಏಕೆ?

ಇದು ಚುನಾವಣಾ ಆಯೋಗದ ವಿಶ್ವಾಸಾರ್ಹತೆಯ ಪ್ರಶ್ನೆಯೋ, ಇವಿಎಂಗಳ ಬಗೆಗಿನ ಆವಿಶ್ವಾಸವೊ?

ಚುನಾವಣಾ ಆಯೋಗದ ವಕ್ತಾರರಾದ ಬಿಜೆಪಿಯವರು ಉತ್ತರ ನೀಡುವರೇ?

ಮುಂದುವರೆದ ರಾಷ್ಟ್ರಗಳು ಇವಿಎಂ ಬಿಟ್ಟು ಬ್ಯಾಲೆಟ್ ಮಾದರಿಯ ಚುನಾವಣೆಗೆ ಮರಳಿರುವಾಗ ರಾಜ್ಯದ ಬಿಜೆಪಿ ನಾಯಕರಿಗೇಕೆ ಬ್ಯಾಲೆಟ್ ಬಗ್ಗೆ ಅಸಹನೆ? ಅಪನಂಬಿಕೆ?

Share this Story:

Follow Webdunia kannada

ಮುಂದಿನ ಸುದ್ದಿ

Karnataka Weather: ಮುಂದಿನ ಮೂರು ದಿನ ರಾಜ್ಯದ ಈ ಭಾಗದಲ್ಲಿ ಭಾರೀ ಮಳೆ