ಮೈಸೂರು: ವೇದಿಕೆಯಲ್ಲಿದ್ದವರಿಗಷ್ಟೇ ಸ್ವಾಗತ, ಮನೆಯಲ್ಲಿ ಕುಳಿತವರಿಗಲ್ಲ ಎಂದು ಡಿಕೆಶಿ ಹೆಸರು ಹೇಳಿ ಎಂದ ಕಾರ್ಯಕರ್ತನಿಗೆ ಸಿದ್ದರಾಮಯ್ಯ ತರಾಟೆ ತೆಗೆದುಕೊಂಡರು.
ಇದೀಗ ರಾಜಕೀಯ ವಲಯದಲ್ಲಿ ಸಿದ್ದರಾಮಯ್ಯ ನಡೆ ಭಾರೀ ಚರ್ಚೆಗೆ ಕಾರಣವಾಗಿದೆ. ಡಿಕೆ ಶಿವಕುಮಾರ್ ಅವರನ್ನು ಕ್ಯಾರೇ ಎನ್ನದೆ ಇಂದು ಸಿದ್ದರಾಮಯ್ಯ ಅವರು ಸಾಧನಾ ಸಮಾವೇಶದಲ್ಲಿ ನಡೆಸಿಕೊಂಡರು.
ಈ ಬಗ್ಗೆ ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ಸಿದ್ದರಾಮಯ್ಯ ನಡೆ ಬಗ್ಗೆ ಬರೆದುಕೊಂಡಿದೆ.
ಸಿದ್ದರಾಮಯ್ಯರ ಶೂನ್ಯ ಸಾಧನೆ ಸಮಾವೇಶದಿಂದ ಎದ್ದು ಹೊರಟ ಡಿಕೆ ಶಿವಕುಮಾರ!
ಮನೆಯಲ್ಲಿ ಕೂತ ಡಿಕೆಶಿಯನ್ನು ಸ್ವಾಗತಿಸಲ್ಲ ಎಂದ ಸಿದ್ದರಾಮಯ್ಯ ಸೆಪ್ಟೆಂಬರ್ ಕ್ರಾಂತಿಗೆ ಮುಹೂರ್ತ ಫಿಕ್ಸ್ ಮಾಡಿದ ಡಿಕೆ ಶಿವಕುಮಾರ್ ಅವರಿಗೆ ಕಾಂಗ್ರೆಸ್ ಸಮಾವೇಶದಲ್ಲಿ ಟಕ್ಕರ್ ಕೊಟ್ಟ ಸಿದ್ದರಾಮಯ್ಯ ಅವರು ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿ ಇಲ್ಲ ಎಂಬುದನ್ನು ಬಹಿರಂಗಪಡಿಸಿದ್ದಾರೆ.