Select Your Language

Notifications

webdunia
webdunia
webdunia
webdunia

ಯೂರಿಯಾ ಕೊರತೆ ವಿಚಾರದಲ್ಲಿ ಬಿಜೆಪಿಗೆ ಸವಾಲೆಸೆದ ಕೃಷಿ ಸಚಿವ ಚಲುವರಾಯಸ್ವಾಮಿ

ಕೃಷಿ ಸಚಿವ ಚಲುವರಾಯಸ್ವಾಮಿ

Sampriya

ಬೆಂಗಳೂರು , ಸೋಮವಾರ, 28 ಜುಲೈ 2025 (18:20 IST)
Photo Credit X
ಬೆಂಗಳೂರು: ಯೂರಿಯಾ ಕೊರತೆ ಬಾರದಂತೆ ಸರ್ಕಾರ ಕ್ರಮ ತೆಗೆದುಕೊಳ್ಳುತ್ತಿದ್ದು, ಬಿಜೆಪಿಯವರು ರಾಜಕೀಯವನ್ನು ಮಾಡುವುದನ್ನು ಬಿಟ್ಟು ಧೈರ್ಯವಿದ್ದರೆ ಕೇಂದ್ರ ಸರ್ಕಾರದಿಂದ ಯೂರಿಯಾ ಕೊಡಿಸಲಿ ಎಂದು ಬಿಜೆಪಿ ನಾಯಕರ ವಿರುದ್ಧ ಕೃಷಿ ಸಚಿವ ಚಲುವರಾಯಸ್ವಾಮಿ  ಸವಾಲೆಸೆದರು. 

ರಾಜ್ಯದಲ್ಲಿ ಯೂರಿಯಾ ಕೊರತೆ ಸಂಬಂಧ ಬಿಜೆಪಿ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಬಹಳ ಸ್ಪಷ್ಟವಾಗಿ ಎಲ್ಲೆಲ್ಲಿ ಯೂರಿಯಾ ಸರಬರಾಜು ಆಗಿದೆ ಎಂದು ಹೇಳಿದ್ದೇನೆ. 

ಡಿಸಿ, ಸೆಕ್ರೆಟರಿ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಬಿಜೆಪಿಯವರಿಗೆ ಮಾತಡೋಕೆ ಬೇರೆ ವಿಷಯ ಇಲ್ಲ ಅದಕ್ಕೆ ಪ್ರತಿಭಟನೆ ಅಂತಿದ್ದಾರೆ. ಇವರಿಗೆ ಕೇಂದ್ರಕ್ಕೆ ಹೋಗಿ ಹೇಳೋ ಧಮ್ ಇಲ್ಲ. ನಾನು ಎಲ್ಲ ಸಂಸದರಿಗೆ ಹಾಗೂ ಕೇಂದ್ರ ಮಂತ್ರಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದೇನೆ. ಸಿಎಂ ಅವರು ಕೂಡ ಪತ್ರ ಬರೆದಿದ್ದಾರೆ. ಇನ್ನೂ ಏನು ಮಾಡಬೇಕಂತೆ ವಿಜಯೇಂದ್ರ, ಅಶೋಕ್‌ಗೆ ತಿರುಗೇಟು ನೀಡಿದರು.

ಕೇಂದ್ರವೇ ನಮಗೆ ಯೂರಿಯಾ ಒದಗಿಸುತ್ತದೆ. ನಾವು ಇದರಲ್ಲಿ ರಾಜಕೀಯ ಮಾಡಲು ಹೋಗುವುದಿಲ್ಲ. ರಾಜ್ಯದ ಒಬ್ಬ ಮಂತ್ರಿಗಾದರೂ ಕೇಂದ್ರಕ್ಕೆ ಪತ್ರ ಬರೆಯುವ ಧಮ್ ಇದ್ಯಾ? ರಾಜ್ಯದ ರೈತರಿಗೆ ರಸಗೊಬ್ಬರ ಕೊಡುತ್ತಿದ್ದೇವೆ. ಕೊಪ್ಪಳದ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಜೊತೆಗೆ ಮಾತಾಡಿದ್ದೇನೆ. ಸಮಸ್ಯೆಗಳ ಬಗ್ಗೆ ಅಧಿಕಾರಿಗಳು ನೋಡಿಕೊಳ್ಳುತ್ತಿದ್ದಾರೆ. ರೈತರ ಸಮಸ್ಯೆಗಳ ಮೇಲೆಯೂ ರಾಜಕಾರಣ ಮಾಡ್ತಿದ್ದಾರೆ. ಇದಕ್ಕೆ ಏನೂ ಮಾಡಲು ಆಗಲ್ಲ. ರೈತರ ಪರ ನಾವಿದ್ದೇವೆ. ಕೇಂದ್ರದಿಂದ ಬರಬೇಕಾದ ಬಾಕಿ ಯೂರಿಯಾ ಬರಲು ಎಲ್ಲಾ ಪ್ರಯತ್ನ ಮಾಡ್ತಿದ್ದೇವೆ. ಬಿಜೆಪಿಯವರಿಗೆ ಧಮ್ಮು, ತಾಕತ್ತಿದ್ರೆ ಕೇಂದ್ರದ ಮೇಲೆ ಒತ್ತಡ ಹಾಕಲಿ ಅಂತ ಕಿಡಿಕಾರಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಬ್ಯಾಂಕಾಕ್‌ನ ಮಾರುಕಟ್ಟೆಯಲ್ಲಿ ಗುಂಡಿನ ದಾಳಿ: ದಾಳಿಕೋರ ಸೇರಿ 6 ಮಂದಿ ಸಾವು