Select Your Language

Notifications

webdunia
webdunia
webdunia
webdunia

ಗಂಡನ ಮೊದಲ ಮದುವೆ ಬಹಿರಂಗ: ಪೊಲೀಸ್ ಠಾಣೆ ಮೆಟ್ಟಿಲೇರಿದ ನವವಧು

ಅಪರಾಧ ಸುದ್ದಿಗಳು
ಬೆಂಗಳೂರು , ಶನಿವಾರ, 27 ಮಾರ್ಚ್ 2021 (10:05 IST)
ಬೆಂಗಳೂರು: ಆಗಷ್ಟೇ ಮದುವೆಯಾಗಿ ಸುಂದರ ಬದುಕನ್ನು ಸ್ವಾಗತಿಸಬೇಕಾಗಿದ್ದ 24 ವರ್ಷದ ನವವಿವಾಹಿತೆ ಈಗ ಪೊಲೀಸ್ ಠಾಣೆ ಮಟ್ಟಿಲೇರಿದ್ದಾಳೆ.


ಮದುವೆಯಾದ ಬಳಿಕ ಗಂಡನ ಮೊದಲ ಮದುವೆ ವಿಚಾರ ಬೆಳಕಿಗೆ ಬಂದಿದೆ. ಮೊದಲ ಪತ್ನಿ ಮತ್ತು ಆಕೆಯ ಇಬ್ಬರು ಮಕ್ಕಳು ಮನೆಗೆ ಬಂದಾಗ ಯುವತಿಗೆ ಶಾಕ್ ಆಗಿದೆ. ಈ ಸಂಬಂಧ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಯುವತಿ ಗಂಡನ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದಾಳೆ.

ವೃತ್ತಿಯಲ್ಲಿ ಪ್ರಾಧ್ಯಾಪಕನಾಗಿರುವ ಮೂರ್ತಿ ಎಂಬ ಆರೋಪಿ ಮೊದಲನೇ ಮದುವೆಯನ್ನು ಮುಚ್ಚಿಟ್ಟು ಎರಡನೇ ಮದುವೆಯಾಗಿದ್ದ. ಮದುವೆಯಾಗಿ ಎರಡು ದಿನ ಕಳೆದ ಮೇಲೆ ಮನೆಗೆ ಮೊದಲ ಪತ್ನಿ ತನ್ನ ಮಕ್ಕಳ ಸಮೇತ ಬಂದಿದ್ದಾಳೆ.  ತನ್ನ ಗಂಡ ಇನ್ನೊಂದು ಮದುವೆಯಾಗಿರುವುದು ನೋಡಿ ಆಕೆಯೂ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾಳೆ. ಇಬ್ಬರು ಹೆಂಡತಿಯರ ಬೆದರಿಕೆಗೆ ಜಗ್ಗಿದ ಆರೋಪಿ ಪತಿ ಸ್ಥಳದಿಂದ ಪರಾರಿಯಾಗಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಮೋದಿಯ ಗಡ್ಡದ ಬಗ್ಗೆ ಮಮತಾ ಬ್ಯಾನರ್ಜಿ ಕಾಮೆಂಟ್!