Publish Date: Fri, 10 May 2019 (16:17 IST)
Updated Date: Fri, 10 May 2019 (16:19 IST)
ಕೈ ಪಾಳೆಯದಲ್ಲಿ ಟ್ರಬಲ್ ಶೂಟರ್ ಎನ್ನಲಾಗುತ್ತಿರುವ ಸಚಿವ ಡಿ.ಕೆ.ಶಿವಕುಮಾರ ಸಭೆ ನಡೆಸಿರುವುದು ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
ಕುಂದಗೋಳ ವಿಧಾನ ಸಭೆ ಉಪಚುನಾವಣೆ ಹಿನ್ನೆಲೆಯಲ್ಲಿ ಕೈ ಅಭ್ಯರ್ಥಿ ಗೆಲುವಿಗೆ ತಂತ್ರ ವನ್ನ ಕಾಂಗ್ರೆಸ್ ನಾಯಕರು ಹೆಣೆಯುತ್ತಿದ್ದಾರೆ.
ಹುಬ್ಬಳ್ಳಿಯ ಖಾಸಗಿ ಹೊಟೇಲ್ ನಲ್ಲಿ ಈ ಕುರಿತು ನಡೆಯುತ್ತಿದೆ ಸಭೆ.
ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿನ ಸಭೆ ಗಮನ ಸೆಳೆದಿದೆ.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಂತೋಷ ಲಾಡ್, ಲಕ್ಷ್ಮೀ ಹೆಬ್ಬಾಳಕರ್, ವೀರಣ್ಣ ಮತ್ತಿಕಟ್ಟಿ, ಶಾಸಕರು, ಸಚಿವರು, ಕೆಪಿಸಿಸಿ, ಎಐಸಿಸಿ ಪದಾಧಿಕಾರಿಗಳು ಭಾಗಿಯಾಗಿದ್ದಾರೆ.
ಕುಂದಗೋಳ ವಿಧಾನ ಸಭಾ ಚುನಾವಣೆಯಲ್ಲಿ ಕಮಲ ಮಣಿಸಲು ಮಾಸ್ಟರ್ ಪ್ಲ್ಯಾನ್ ಮಾಡುತ್ತಿರುವ ನಾಯಕರು ಸಭೆ ನಡೆಸಿದ್ದಾರೆ.
ಇನ್ನು ಶ್ರೀರಾಮುಲು ಹೇಳಿಕೆ ಲಾಭ ಪಡೆಯುವುದು, ಶಿವಳ್ಳಿ ಅವರ ಅಭಿವೃದ್ಧಿ ಕಾರ್ಯ, ಮೈತ್ರಿ ಸರ್ಕಾರದ ಕಾರ್ಯ ಸಾಧನೆ ಜನತೆಗೆ ತಲುಪಿಸುವ ತಂತ್ರಕ್ಕೆ ಹಾಕಿದ್ದಾರೆ ಕೈ ನಾಯಕರು.