ಲಿಂಗಾಯತ ಮುಖಂಡರ ಮೇಲೆ ಸಿಎಂ ಯಡಿಯೂರಪ್ಪ ಗರಂ ಆಗಿದ್ದೇಕೆ?

ಬುಧವಾರ, 31 ಜುಲೈ 2019 (11:33 IST)
ಬೆಂಗಳೂರು : ಸಚಿವ ಸ್ಥಾನಕ್ಕಾಗಿ ಬಿಜೆಪಿಯಲ್ಲಿ ಪೈಪೋಟಿ ಶುರುವಾಗಿದ್ದು, ಈ ವಿಚಾರಕ್ಕೆ ಲಿಂಗಾಯತ ಮುಖಂಡರ  ಮೇಲೆ ಸಿಎಂ ಯಡಿಯೂರಪ್ಪ ಗರಂ ಆಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ.ಈ ಘಟನೆ ಯಡಿಯೂರಪ್ಪ ಅವರ ಡಾಲರ್ಸ್ ಕಾಲೊನಿ ನಿವಾಸದಲ್ಲಿ ನಡೆದಿದೆ. ಆಗಸ್ಟ್ 8 ಅಥವಾ 10ಕ್ಕೆ ಮೊದಲ ಸಂಪುಟ ವಿಸ್ತರಣೆಯಾಗಲಿದೆ ಎಂಬ ಸುದ್ದಿ ಹರಿದಾಡುತ್ತಿರುವ ಹಿನ್ನಲೆಯಲ್ಲಿ ಪಂಚಮಸಾಲಿ ಲಿಂಗಾಯತ ಸಮುದಾಯದಿಂದ 15 ಬಿಜೆಪಿ ಶಾಸಕರು ಗೆದ್ದಿದ್ದು, ಇವರ ಪೈಕಿ 4 ಮಂದಿಗಾದರೂ ಸಂಪುಟದಲ್ಲಿ ಅವಕಾಶ ನೀಡಿ ಎಂದು ಸಮುದಾಯದ ಮುಖಂಡರು ಯಡಿಯೂರಪ್ಪ ಅವರಲ್ಲಿ ಒತ್ತಡ ಹೇರಿದ್ದಾರೆ.


ಇದರಿಂದ ಕೋಪಗೊಂಡ ಸಿಎಂ ಯಡಿಯೂರಪ್ಪ, ಕೇವಲ ನಾಲ್ಕು ಮಾತ್ರ ಸಾಕಾ? ಐದು ಬೇಡವಾ. ನಿಮಗೆ ಎಲ್ಲಾ ಕೊಟ್ಟುಬಿಟ್ಟರೆ ರಾಜೀನಾಮೆ ನೀಡಿದ 16 ಶಾಸಕರು ವಿಷ ಕುಡಿಯಬೇಕಾ ಎಂದು ಯಡಿಯೂರಪ್ಪ ಕಿಡಿಕಾರಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಸಿದ್ಧಾರ್ಥ್ ಸಾವಿಗೆ ಐಟಿ ಇಲಾಖೆ ಮೇಲೆ ಆರೋಪ ಮಾಡಿ ಟ್ರೋಲ್ ಆದ ಸಿದ್ದರಾಮಯ್ಯ