Select Your Language

Notifications

webdunia
webdunia
webdunia
webdunia

ತೂಕ ಇಳಿಸಿಕೊಳ್ಳಲು ಗ್ರೀನ್ ಟೀಯನ್ನು ಯಾವಾಗ, ಎಷ್ಟು ಕುಡಿಯಬೇಕು ಎಂಬುದು ತಿಳಿಯಬೇಕಾ?

ತೂಕ ಇಳಿಸಿಕೊಳ್ಳಲು ಗ್ರೀನ್ ಟೀಯನ್ನು ಯಾವಾಗ, ಎಷ್ಟು ಕುಡಿಯಬೇಕು ಎಂಬುದು ತಿಳಿಯಬೇಕಾ?
ಬೆಂಗಳೂರು , ಬುಧವಾರ, 31 ಜುಲೈ 2019 (09:10 IST)
ಬೆಂಗಳೂರು : ಗ್ರೀನ್ ಟೀ ಕುಡಿಯುವುದರಿಂದ ತೂಕ ಕಡಿಮೆ ಮಾಡಿಕೊಳ‍್ಳಬಹುದು ಎಂದು ಹೇಳುತ್ತಾರೆ. ಕೆಲವರು ಗ್ರೀನ್ ಟೀ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಹೇಳುತ್ತಾರೆ. ಆದರೆ ಗ್ರೀನ್ ಟೀಯನ್ನು ಸರಿಯಾದ ಸಮಯಕ್ಕೆ ಯಾವಾಗ, ಹೇಗೆ, ಎಷ್ಟು ತೆಗೆದುಕೊಳ್ಳಬೇಕು ಎಂದು ತಿಳಿವಳಿಕೆ ಇಲ್ಲದೇ ಅದನ್ನು ಸೇವಿಸಿದರೆ ಇದರಿಂದ ಆರೋಗ್ಯದ ಪರಿಣಾಮ ಬೀರಬಹುದು. ಆದ್ದರಿಂದ ಗ್ರೀನ್ ಟೀಯನ್ನು ಹೇಗೆ ಮಾಡುವುದು, ಯಾವಾಗ ಕುಡಿಯಬೇಕು, ಎಷ್ಟು ಕುಡಿಯಬೇಕು ಎಂದು ತಿಳಿಯಬೇಕು ಎಂಬುದನ್ನು ಮೊದಲು ತಿಳಿದುಕೊಳ್ಳಿ.



1ಕಪ್ ನೀರನ್ನು ಚೆನ್ನಾಗಿ ಕುದಿಸಿ ನಂತರ ಗ್ಯಾಸ್ ಆಫ್ ಮಾಡಿ ಬಳಿಕ  ಅದಕ್ಕೆ 1 ಚಮಚ ಗ್ರೀನ್ ಟೀ ಎಲೆಗಳನ್ನು ಹಾಕಿ 15-20ನಿಮಿಷ ಹಾಗೇ ಇಡಿ. ನಂತರ ಅದನ್ನು ಸೋಸಿ. ಇದಕ್ಕೆ ತಣ್ಣಗಾದ ಮೇಲೆ ಜೇನುತುಪ್ಪ ಮಿಕ್ಸ್ ಮಾಡಿ ಹಾಗೇ ಇದಕ್ಕೆ ನಿಂಬೆಹಣ್ಣಿನ ರಸ ಮಿಕ್ಸ್ ಮಾಡಬಾರದು. ಇದರಿಂದ ಆರೋಗ್ಯ ಸಮಸ್ಯೆ ಎದುರಾಗುತ್ತದೆ.


ಅಲ್ಲದೇ ಖಾಲಿ ಹೊಟ್ಟೆಯಲ್ಲಿ ಗ್ರೀನ್ ಟೀ ಕುಡಿಯಬೇಡಿಇದನ್ನು ಬ್ರೇಕ್ ಫಾಸ್ಟ್ ಆಗಿ 1ಗಂಟೆ ನಂತರ ಕುಡಿಯಿರಿ ಅಥವಾ ಊಟಕ್ಕೆ ಮುಂಚೆ ಗ್ರೀನ್ ಟೀ ಕುಡಿಯಿರಿ ಇಲ್ಲವಾದರೆ ಊಟವಾದ ಮೇಲೆ 1 ಗಂಟೆ ನಂತರ ಕುಡಿಯಿರಿ. ದಿನಕ್ಕೆ 2 ಬಾರಿ ಅಷ್ಟೇ ಕುಡಿಯಿರಿ . ಹಾಗೇ ಸಂಜೆ 6 ಗಂಟೆ ಒಳಗೆ ಇದನ್ನು ಕುಡಿಯಬೇಕು. ರಾತ್ರಿ ಇದನ್ನು ಸೇವಿಸಬೇಡಿ. ಹೀಗೆ ಇದನ್ನು ಸರಿಯಾದ ಕ್ರಮದಲ್ಲಿ ಸೇವಿಸಿದರೆ ಇದರಿಂದ ತೂಕ ಇಳಿಸಿಕೊಳ್ಳುವುದರ ಜೊತೆಗೆ ಅನೇಕ ಆರೋಗ್ಯಕರ ಉಪಯೋಗಗಳನ್ನು ಪಡೆಯಬಹುದು.


Share this Story:

Follow Webdunia kannada

ಮುಂದಿನ ಸುದ್ದಿ

ನಾನ್ ವೆಜ್, ವೆಜಿಟೇರಿಯನ್ ಆಹಾರ: ಯಾವುದು ತಿಂದರೆ ಲೈಂಗಿಕಾಸಕ್ತಿ ಹೆಚ್ಚಿರುತ್ತದೆ?