Publish Date: Sun, 07 Jul 2019 (15:45 IST)
Updated Date: Sun, 07 Jul 2019 (15:47 IST)
ಬೆಳ್ಳಂಬೆಳಗ್ಗೆ ಅವರು ಮಾಡಿದ ಕೆಲಸದಿಂದಾಗಿ ನೂರಾರು ಬಡಜನರ ಬದುಕು ಬೀದಿಗೆ ಬಿದ್ದಿದೆ.
ಬೆಳ್ಳಂಬೆಳಿಗ್ಗೆ ನಗರ ಸಭೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ. ಚಿತ್ರದುರ್ಗ ನಗರದ ಮಧ್ಯ ಭಾಗದ ಗಾಂಧಿ ವೃತ್ತದ ಅಕ್ಕಪಕ್ಕ ಸಂತೇ ಪೇಟೆ ಮತ್ತು ಸಂತೆ ಹೊಂಡ ರಸ್ತೆಯ ಪಕ್ಕದಲ್ಲಿದ್ದ ಹಲವು ಗೂಡಂಗಡಿಗಳನ್ನು ತೆರವು ಕಾರ್ಯಾಚರಣೆ ಮೂಲಕ ನೆಲಸಮಗೊಳಿಸಲಾಯಿತು.
ಕಿರಿದಾದ ರಸ್ತೆ ಪಕ್ಕದಲ್ಲಿ ಇಡಲಾಗಿದ್ದ ನೂರಕ್ಕೂ ಹೆಚ್ಚು ಗೂಡಂಗಡಿಯನ್ನು ತೆರವು ಗೊಳಿಸಿದ್ದಾರೆ ನಗರಸಭೆ ಸಿಬ್ಬಂದಿ.
ಗೂಡಂಗಡಿಗಳನ್ನು ಕಳೆದುಕೊಂಡ ಬಡ ಜನರು ತಮ್ಮ ಮುಂದಿನ ಜೀವನ ಹೇಗೆ ಎಂಬ ಚಿಂತೆಯಲ್ಲಿದ್ದಾರೆ.
ಪೊಲೀಸರ ಬಂದೋಬಸ್ತ್ ನಲ್ಲಿ ಕಾರ್ಯಾಚರಣೆಗೆ ಇಳಿದಿದ್ದರು ನಗರ ಸಭೆ ಸಿಬ್ಬಂದಿ.