Select Your Language

Notifications

webdunia
webdunia
webdunia
webdunia

ಬೆಂಗಳೂರಲ್ಲಿ ಇದ್ದಕ್ಕಿದ್ದ ಹಾಗೆ ಕೊತ್ತಂಬರಿ ಸೊಪ್ಪು ಬೆಲೆ ಗಗನಕ್ಕೇರಿದ್ದು ಹೇಗೆ ಗೊತ್ತಾ?!

ಬೆಂಗಳೂರಲ್ಲಿ ಇದ್ದಕ್ಕಿದ್ದ ಹಾಗೆ ಕೊತ್ತಂಬರಿ ಸೊಪ್ಪು ಬೆಲೆ ಗಗನಕ್ಕೇರಿದ್ದು ಹೇಗೆ ಗೊತ್ತಾ?!
ಬೆಂಗಳೂರು , ಮಂಗಳವಾರ, 23 ಅಕ್ಟೋಬರ್ 2018 (08:52 IST)
ಬೆಂಗಳೂರು: ಕೊತ್ತಂಬರಿ ಸೊಪ್ಪು ಇಲ್ಲದೆ ಅಡುಗೆ ಮನೆಯಲ್ಲಿ ಕೆಲಸ ಸಾಗಲ್ಲ. ಆದರೆ ಈಗಿನ ಕೊತ್ತಂಬರಿ ಸೊಪ್ಪಿನ ಬೆಲೆ ಕೇಳಿದ್ರೆ ಹೌಹಾರುವುದು ಗ್ಯಾರಂಟಿ.

ವಾರದ ಹಿಂದೆ ಒಂದು ಕಟ್ಟು ಕೊತ್ತಂಬರಿ ಸೊಪ್ಪು ಬೆಲೆ 15 ರಿಂದ 20 ರೂ. ಇತ್ತು. ಆದರೆ ಈಗ ಇದ್ದಕ್ಕಿದ್ದ ಹಾಗೆ ಬೆಲೆ ಏರಿಕೆಯಾಗಿದ್ದು, 40 ರಿಂದ 50 ರೂ.ಗೆ ತಲುಪಿದೆ.

ಕೋಲಾರ, ಆನೇಕಲ್ ನಲ್ಲಿ ಕೊತ್ತಂಬರಿ ಸೊಪ್ಪು ಹೆಚ್ಚಾಗಿ ಬೆಳೆಯಲಾಗುತ್ತದೆ. ಆದರೆ ಇಲ್ಲಿ ಅಕಾಲಿಕ ಮಳೆಯಾಗಿರುವುದರಿಂದ ಕೊತ್ತಂಬರಿ ಸೊಪ್ಪಿನ ಬೆಳೆಗೆ ಹಾನಿಯಾಗಿದೆ. ಇದರಿಂದ ಪೂರೈಕೆ ಕಡಿಮೆಯಾಗಿದ್ದು ಬೆಲೆ ಏರಿಕೆಯಾಗಿದ್ದು, ಬಹುಶಃ ಇದು ಮುಂದಿನ ಎರಡು ವಾರಗಳ ಹೀಗೆಯೇ ಮುಂದುವರಿಯುವ ಸಾಧ್ಯತೆಯಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಸೆಲ್ಫೀ ತೆಗೆದು ವಿವಾದಕ್ಕೊಳಗಾದ ಮಹಾರಾಷ್ಟ್ರ ಸಿಎಂ ಪತ್ನಿ ಕೊನೆಗೆ ಹೇಳಿದ್ದೇನು?