Select Your Language

Notifications

webdunia
webdunia
webdunia
webdunia

ಸೆಲ್ಫೀ ತೆಗೆದು ವಿವಾದಕ್ಕೊಳಗಾದ ಮಹಾರಾಷ್ಟ್ರ ಸಿಎಂ ಪತ್ನಿ ಕೊನೆಗೆ ಹೇಳಿದ್ದೇನು?

ಸೆಲ್ಫೀ ತೆಗೆದು ವಿವಾದಕ್ಕೊಳಗಾದ ಮಹಾರಾಷ್ಟ್ರ ಸಿಎಂ ಪತ್ನಿ ಕೊನೆಗೆ ಹೇಳಿದ್ದೇನು?
ಮುಂಬೈ , ಮಂಗಳವಾರ, 23 ಅಕ್ಟೋಬರ್ 2018 (08:35 IST)
ಮುಂಬೈ: ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಪತ್ನಿ ಅಮೃತಾ ಫಡ್ನವಿಸ್ ನಿಷೇಧಿತ ಸ್ಥಳದಲ್ಲಿ ಭದ್ರತಾ ನಿಯಮ ಉಲ್ಲಂಘಿಸಿ ಸೆಲ್ಫೀ ತೆಗೆದು ವಿವಾದಕ್ಕೀಡಾದ ಬಳಿಕ ಕ್ಷಮೆ ಯಾಚಿಸಿದ್ದಾರೆ.

ಹಡಗೊಂದರ ಅಂಚಿನಲ್ಲಿ ಕುಳಿತು ಕಡಲ ಮಧ್ಯೆ ಸೆಲ್ಫೀ ತೆಗೆಯುವ ಅಮೃತಾ ಫಡ್ನವಿಸ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಮೂಲಕ ಅಪಾಯಕಾರಿ ಸ್ಥಳದಲ್ಲಿ ಭದ್ರತಾ ಅಧಿಕಾರಿಗಳಿಗೆ ಕಿವಿಗೊಡದೇ ಅಮೃತಾ ರಿಸ್ಕ್ ತೆಗೆದುಕೊಂಡಿದ್ದಾರೆ ಎಂದು ವಿವಾದವಾಗಿತ್ತು.

ಆದರೆ ಇದು ವಿವಾದವಾಗುತ್ತಿದ್ದಂತೆ ಪ್ರತಿಕ್ರಿಯಿಸಿರುವ ಅಮೃತಾ ಯಾರಿಗಾದರೂ ನಾನು ಮಾಡಿದ್ದು ತಪ್ಪು ಎನಿಸಿದರೆ ಕ್ಷಮೆ ಕೇಳುತ್ತೇನೆ. ಆದರೆ ನಾನು ಅಪಾಯಕಾರಿ ಸ್ಥಳದಲ್ಲಿ ಕುಳಿತಿರಲಿಲ್ಲ. ನಾನು ಕುಳಿತ ಸ್ಥಳದಿಂದ ಕೆಳಗೆ ಇನ್ನೂ ಎರಡು ಮೆಟ್ಟಿಲುಗಳಿದ್ದವು ಎಂದು ಅಮೃತಾ ಸ್ಪಷ್ಟನೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಎಚ್ ಡಿ ದೇವೇಗೌಡ, ಸಿಎಂ ಎಚ್ ಡಿಕೆ ವಿರುದ್ಧ ಜೆಡಿಎಸ್ ಮುಖಂಡರ ಅಸಮಾಧಾನ