Publish Date: Thu, 02 Jul 2026 (10:35 IST)
Updated Date: Thu, 02 Jul 2026 (10:37 IST)
ಬೆಂಗಳೂರು: ಗೃಹಜ್ಯೋತಿ ಯೋಜನೆಗೆ ಜಾತಿ ಸರ್ಟಿಫಿಕೇಟ್ ಕೇಳ್ತಿರೋದು ಯಾಕೆ? ಫ್ರೀ ವಿದ್ಯುತ್ ಕೊಡಲೂ ಜಾತಿ ಬೇಕಾ ಎಂದು ಬಿಜೆಪಿ ನಾಯಕ ಆರ್ ಅಶೋಕ್ ಕಿಡಿ ಕಾರಿದ್ದಾರೆ. ಜೊತೆಗೆ ಈಗ ಸಾರ್ವಜನಿಕರಿಂದಲೂ ಈ ಪ್ರಶ್ನೆ ಕೇಳಿಬರುತ್ತಿದೆ.
ನಿನ್ನೆಯಿಂದ ರಾಜ್ಯ ಸರ್ಕಾರ ಗೃಹಜ್ಯೋತಿ ಯೋಜನೆ ಮರುಪರಿಷ್ಕರಣೆಗೆ ಮುಂದಾಗಿದೆ. ಮನೆ ಮನೆಗೆ ಅಧಿಕಾರಿಗಳು ಬಂದು ದಾಖಲೆಗಳ ಪರಿಶೀಲನೆ ನಡೆಸಲಿದ್ದಾರೆ. ಕರ್ನಾಟಕದ ನಿವಾಸಿಗಳಿಗೆ ಮಾತ್ರ ಗೃಹಜ್ಯೋತಿ ನೀಡುವುದಾಗಿ ಸಿಎಂ ಘೋಷಿಸಿದ್ದಾರೆ.
ಇದೀಗ ಅಧಿಕಾರಿಗಳಿಗೆ ಗೃಹಜ್ಯೋತಿ ಯೋಜನೆಗೆ ದಾಖಲೆಗಳನ್ನು ನೀಡುವಾಗ ಜಾತಿ ಸರ್ಟಿಫಿಕೇಟ್ ನ್ನೂ ಕೇಳಲಾಗುತ್ತಿರುವುದು ವಿವಾದಕ್ಕೆ ಕಾರಣವಾಗಿದೆ. ಉಚಿತ ವಿದ್ಯುತ್ ಗೂ ಜಾತಿಗೂ ಏನು ಸಂಬಂಧ? ಎಂದು ಬಿಜೆಪಿ ನಾಯಕರು ಪ್ರಶ್ನೆ ಮಾಡಿದ್ದಾರೆ.
ಗೃಹಜ್ಯೋತಿ ಎಲ್ಲರಿಗೂ ಫ್ರೀ ಎಂದು ಈಗ ಕಂಡೀಷನ್ ಹಾಕುತ್ತಿರುವುದು ಯಾಕೆ ಎಂದು ಬಿಜೆಪಿ ನಾಯಕ ಸಿಟಿ ರವಿ ಪ್ರಶ್ನೆ ಮಾಡಿದ್ದಾರೆ. ಇನ್ನೊಂದೆಡೆ ಗೃಹಜ್ಯೋತಿ ಪರಿಷ್ಕರಣೆ ಹೆಸರಿನಲ್ಲಿ ಸರ್ಕಾರ ತಾನೇ ಎಸ್ಐಆರ್ ನಡೆಸಲು ಮುಂದಾಗಿದೆಯೇ ಎಂದು ಅನುಮಾನ ಮೂಡಿಬರುತ್ತಿದೆ. ಇನ್ನು, ಜಾತಿ ಸರ್ಟಿಫಿಕೇಟ್ ಕೇಳುತ್ತಿರುವುದನ್ನು ಸಮರ್ಥಿಸಿಕೊಂಡಿರುವ ಸಚಿವ ಕೆಜೆ ಜಾರ್ಜ್, ಜಾತಿ ಪ್ರಮಾಣ ಪತ್ರ ಕೇಳಿದರೆ ತಪ್ಪೇನು? ಜಾತಿಗಣತಿಗೆ ಮಾಹಿತಿ ಕೊಟ್ಟಿರುವುದನ್ನೇ ಕೇಳುತ್ತಿದ್ದೇವೆ. ಜಾತಿ ಆಧಾರವಾಗಿ ನಾವು ವಿದ್ಯುತ್ ನೀಡುತ್ತಿಲ್ಲ, ಎಲ್ಲಾ ಜಾತಿಯವರಿಗೆ ವಿದ್ಯುತ್ ನೀಡುತ್ತೇವೆ ಎಂದಿದ್ದಾರೆ. ಅದೇನೇ ಇದ್ದರೂ ಸರ್ಕಾರ ಕೇಳುತ್ತಿರುವ ದಾಖಲೆಗಳು ವಿಪಕ್ಷಗಳ ಅಸಮಾಧಾನಕ್ಕೆ ಗುರಿಯಾಗಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ