Webdunia - Bharat's app for daily news and videos

Install App

ಬಿಜೆಪಿ ಶಾಸಕ ರವಿಕುಮಾರ್ ಸಿಎಂ ಕಾರಿನಲ್ಲಿ ಇದ್ದಿದ್ದು ಯಾಕೆ: ನಿಜ ಕಾರಣ ಬಯಲು

Krishnaveni K
ಗುರುವಾರ, 30 ಅಕ್ಟೋಬರ್ 2025 (16:27 IST)
Photo Credit: Facebook
ಬೆಂಗಳೂರು: ಬಿಜೆಪಿ ಶಾಸಕ, ವಿರೋಧ ಪಕ್ಷದ ಮುಖ್ಯ ಸಚೇತಕ ಎನ್ ರವಿಕುಮಾರ್ ನಿನ್ನೆ ಸಿಎಂ ಸಿದ್ದರಾಮಯ್ಯ ಕಾರಿನಲ್ಲಿ ಒಟ್ಟಿಗೇ ಪ್ರಯಾಣ ಮಾಡಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಅವರು ಈ ರೀತಿ ಮಾಡಿದ್ದರ ಹಿಂದಿನ ನಿಜ ಕಾರಣ ಬಯಲಾಗಿದೆ.

ಎನ್ ರವಿಕುಮಾರ್ ಮುಖ್ಯಮಂತ್ರಿಗಳ ಕಾರಿನಲ್ಲಿ ಕುಳಿತು ಪ್ರಯಾಣ ಮಾಡುವುದಕ್ಕೂ ಕಾರಣವಿದೆ ಎಂದು ಡಿಜಿಟಲ್ ಕ್ರಿಯೇಟರ್ ರವಿ ಶಿವರಾಮ್ ಎಂಬವರು ತಮ್ಮ ಫೇಸ್ ಬುಕ್ ಪುಟದಲ್ಲಿ ಬರೆದುಕೊಂಡಿದ್ದಾರೆ. ಇದರ ಹಿಂದೆ ಒಳ್ಳೆಯ ಉದ್ದೇಶವಿತ್ತು ಎಂದು ಅವರು ದಾಖಲೆ ಸಮೇತ ವಿವರಿಸಿದ್ದಾರೆ.

‘37 ಜನರ ಜೀವ ಉಳಿಸುವ ಕಾರ್ಯವನ್ನು ವಿಧಾನ ಪರಿಷತ್ ವಿಪಕ್ಷ ಸಚೇತಕ ಎನ್ ರವಿಕುಮಾರ್ ಅವರು ಮುತುವರ್ಜಿವಹಿಸಿ ಮಾಡುತ್ತಿರೋದು ಶ್ಲಾಘನೀಯ. ಅತ್ಯಂತ ವಿರಳ ಕಾಯಿಲೆಗೆ ರಾಜ್ಯದಲ್ಲಿ 37 ಮಂದಿ ತುತ್ತಾಗಿದ್ದಾರೆ. ಆ ವಿರಳ ಕಾಯಿಲೆಗೆ ಒಮ್ಮೆ ಚಿಕಿತ್ಸೆ ಕೊಡಿಸಲು( ಒಂದು ಇಂಜೆಕ್ಷನ್‌ ಗೆ) 4ಲಕ್ಷ ರೂಪಾಯಿ ತಗಲುತ್ತದೆ. ವರ್ಷಕ್ಕೆ ಸುಮಾರು 14 ಕೋಟಿ ಚಿಕಿತ್ಸೆಗೆ ವೆಚ್ಚ ತಗಲುತ್ತದೆ. ಪಾಪ ಇಷ್ಟು ಖರ್ಚು ಮಾಡುವ ಶಕ್ತಿ ಯಾರಿಗೂ ಇಲ್ಲ. ಹೀಗಾಗಿ ಸರ್ಕಾರ ಈ ಬಗ್ಗೆ ಮುತುವರ್ಜಿ ವಹಿಸಿ, 50 ಕೋಟಿ ರೂಪಾಯಿಯನ್ನು ಬ್ಯಾಂಕ್ ಲ್ಲಿ ಡೆಪೊಸಿಟ್ ಮಾಡಿದರೆ, ಅದರಿಂದ ಬರುವ ಬಡ್ಡಿ ಹಣದಿಂದ ಆ ಜೀವಿಗಳಿಗೆ ಚಿಕಿತ್ಸೆ ನೀಡಬಹುದು ಎಂಬ ಸಲಹೆ ಬಂದಿದೆ. ಹೀಗಾಗಿ ಈ ವಿಚಾರವನ್ನ ಮಾನ್ಯ ಮುಖ್ಯಮಂತ್ರಿ ಅವರ ಗಮನಕ್ಕೆ ತರಲು ರವಿಕುಮಾರ್ ಅವರು ಮನವಿ ಪತ್ರದೊಂದಿಗೆ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ವಿಷಯವನ್ನು ವಿವರಿಸಿದ್ದಾರೆ. ಮುಖ್ಯಮಂತ್ರಿಗಳು ಕಾರ್ಯದ ಒತ್ತಡದಲ್ಲಿ ಇದ್ದರೂ, ವಿಷಯ ಗಂಭೀರವಾಗಿ ಇರುವುದರಿಂದ ಸಿದ್ದರಾಮಯ್ಯನವರು ಈ ವಿಷಯಕ್ಕೆ ಹೆಚ್ಚಿನ ಗಮನ ನೀಡಿದ್ದಾರೆ ಮಾತ್ರವಲ್ಲ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಏನು ಮಾಡಬೇಕು ಮಾಡಬಹುದು ಎನ್ನೋದನ್ನ ಚರ್ಚೆ ಮಾಡೋಣ, ನಾನು ಈಗ ವಿಧಾನಸೌಧಕ್ಕೆ ಹೊರಟಿದ್ದೇನೆ. ನೀನು ಕಾರಿನಲ್ಲಿ ಕುಳಿತುಕೊ ಎಂದು ಜೊತೆಗೆ ಕರೆದುಕೊಂಡ ಬಂದ ಸಿದ್ದರಾಮಯ್ಯ ಅವರು ವಿಧಾನಸೌಧ ತಲುಪಿದ ಮೇಲೂ ಮುಖ್ಯಮಂತ್ರಿಗಳ ಚೇಂಬರ್ ತನಕ ಇದೇ ವಿಷಯ ಚರ್ಚೆ ನಡೆಸಿದ್ದಾರೆ. ಈ ಎಲ್ಲಾ ಜೀವಿಗಳಿಗೆ ಸಹಾಯ ಮಾಡುವ ಸರ್ಕಾರದಿಂದ ಬೇಕಾದ ಸೌಲಭ್ಯ ಒದಗಿಸುವ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ’ ಎಂದು ಅವರು ಬರೆದುಕೊಂಡಿದ್ದಾರೆ.

ಇದಕ್ಕೆ ತಕ್ಕಂತೆ ಈ ಫೋಟೋದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ರವಿಕುಮಾರ್ ಯಾವುದೋ ಕಾಗದ  ಪತ್ರಗಳನ್ನು ತೋರಿಸುತ್ತಿರುವುದು ಕಾಣಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮೇಕೆದಾಟು ಯೋಜನೆ ವಿರೋಧಿಸಿದವರಿಗೆ ಸನ್ಮಾನ, ಗೌರವ ಕೊಡಬೇಕೇ

ಮೈಕ್ ತಾನೇ ಆಫ್ ಮಾಡಿ ಕೂಗಾಡಿದ್ರಾ ರಾಹುಲ್ ಗಾಂಧಿ, ಬಿಜೆಪಿ ಆರೊಪ: ವೈರಲ್ ವಿಡಿಯೋದಲ್ಲಿ ಏನಿದೆ

ಚಿಲ್ಲರೆ ನೀಡದ್ದಕ್ಕೆ ಸಚಿವರನ್ನೇ ಬಸ್‌ನಿಂದ ಕೆಳಗಿಳಿಯಲು ಹೇಳಿದ್ದ ಬಸ್‌ ಕಂಡಕ್ಟರ್‌ ಅಮಾನತು ಬಗ್ಗೆ ಬಿಗ್ ಅಪ್ಡೇಟ್‌

ದೆಹಲಿಯಲ್ಲಿನ ಅಮಿತ್ ಶಾ ವಿರುದ್ಧದ ಆರೋಪಗಳಿಗೆ ಬದ್ಧ ಎಂದ ರಾಹುಲ್ ಗಾಂಧಿ

ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಬೃಹತ್ ಮರ ಬಿದ್ದು ಇಬ್ಬರು ಮಹಿಳಾ ಕಾರ್ಮಿಕರು ದುರ್ಮರಣ

ಮುಂದಿನ ಸುದ್ದಿ
Show comments