Webdunia - Bharat's app for daily news and videos

Install App

ಅನುಭವವಿಲ್ಲದ ಆ ಹುಡುಗ ಇನ್ನೂ ಎಳಸು: ಡಿಕೆ ಶಿವಕುಮಾರ್ ಕಿಡಿ

Sampriya
ಗುರುವಾರ, 30 ಅಕ್ಟೋಬರ್ 2025 (16:05 IST)
ಬೆಂಗಳೂರು: ಬೆಂಗಳೂರು ಅಭಿವೃದ್ಧಿ ವಿಚಾರವಾಗಿ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸಂಸದ ತೇಜಸ್ವಿ ಸೂರ್ಯ ನಡುವೆ ವಾಕ್ಸಮರ ಜೋರಾಗಿದೆ. ಇದೀಗ ತೇಜಸ್ವಿ ಸೂರ್ಯರನ್ನು ಎಳಸು ಎನ್ನುವ ಮೂಲಕ ಡಿಸಿಎಂ ಮತ್ತೇ ಕಾಲೆಳೆದಿದ್ದಾರೆ. 

ನಗರದ ಖಾಸಗಿ ಹೋಟೆಲ್‌ನಲ್ಲಿ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಅನುಭವವಿಲ್ಲದ ಆ ಹುಡುಗ ಇನ್ನು ಎಳಸು. ಅವನೊಬ್ಬ ವೇಸ್ಟ್ ಮೆಟೀರಿಯಲ್. ಗೌರವ ಕೊಟ್ಟು ಕರೆದು ಮಾತಾಡಿದರೆ ಇದೀಗ ಬಾಯಿಗೆ ಬಂದ ಹಾಗೇ ವದರುತ್ತಿದ್ದಾನೆ ಎಂದು ಕಿಡಿಕಾರಿದರು. 

ಟನಲ್ ರಸ್ತೆ ಬೇಡ ಹೇಳುವುದಕ್ಕೆ ಈ ತೇಜಸ್ವಿ ಸೂರ್ಯ ಯಾರು? ಈ ದೇಶದಲ್ಲಿ, ಪ್ರಪಂಚದಲ್ಲಿಯೇ ಟನಲ್ ರಸ್ತೆಗಳೇ ಬೇಡ ಎಂದು ಅವನು ಕೇಂದ್ರ ಸಚಿವನಾದ ಮೇಲೆ ಲೋಕಸಭೆಯಲ್ಲಿ ತೀರ್ಮಾನ ಮಾಡಲಿ ಎಂದು ಕಿಡಿ ಕಾರಿದ್ದಾರೆ.

ಗೌರವ ನೀಡಿ ಮಾತನಾಡಲು ಕರೆದರೆ  ಇದೀಗ ಏನೇನೋ ಮಾತನಾಡುತ್ತಿದ್ದಾನೆ. ಆದರೆ ನಾನು ಆತನ ಬಗ್ಗೆ ಮಾತನಾಡಲು ಹೋಗುವುದಿಲ್ಲ. ಸಂಸದ ತೇಜಸ್ವಿ ಸೂರ್ಯನಿಗೆ ಪ್ರಪಂಚ ಹೇಗಿದೆ ಎಂದೇ ಗೊತ್ತಿಲ್ಲ ಎಂದರು. 

ನಾನು ಹುಡುಗನ ಬಳಿ ಕಾರಿಲ್ಲದಿದ್ದರೆ ಹೆಣ್ಣು ನೀಡುವುದಿಲ್ಲ ಎಂದು ಹೇಳಿರುವುದನ್ನು ಅದನ್ನೇ ಮತ್ತೇ ಮತ್ತೇ ಹೇಳುತ್ತಿದ್ದಾನೆ. ಈತ ಏಕೆ ಕಾರಲ್ಲಿ ಓಡಾಡುತ್ತಿದ್ದಾನೆ? ಆತ, ಆತನ ಕುಟುಂಬ ಸದಸ್ಯರು ಮೆಟ್ರೋ, ಸರ್ಕಾರಿ ಬಸ್ ಬಳಸಲಿ. ಅವರ ಪಕ್ಷದ ಶಾಸಕರು ಮೆಟ್ರೋ, ಆಟೋರಿಕ್ಷಾ, ಸಾರ್ವಜನಿಕ‌ ಸಾರಿಗೆಗಳಲ್ಲಿ ಓಡಾಡಲಿ. ಬೇಡ ಎಂದವರಾರು ಎಂದು ಪ್ರಶ್ನೆ ಮಾಡಿದರು. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮೇಕೆದಾಟು ಯೋಜನೆ ವಿರೋಧಿಸಿದವರಿಗೆ ಸನ್ಮಾನ, ಗೌರವ ಕೊಡಬೇಕೇ

ಮೈಕ್ ತಾನೇ ಆಫ್ ಮಾಡಿ ಕೂಗಾಡಿದ್ರಾ ರಾಹುಲ್ ಗಾಂಧಿ, ಬಿಜೆಪಿ ಆರೊಪ: ವೈರಲ್ ವಿಡಿಯೋದಲ್ಲಿ ಏನಿದೆ

ಚಿಲ್ಲರೆ ನೀಡದ್ದಕ್ಕೆ ಸಚಿವರನ್ನೇ ಬಸ್‌ನಿಂದ ಕೆಳಗಿಳಿಯಲು ಹೇಳಿದ್ದ ಬಸ್‌ ಕಂಡಕ್ಟರ್‌ ಅಮಾನತು ಬಗ್ಗೆ ಬಿಗ್ ಅಪ್ಡೇಟ್‌

ದೆಹಲಿಯಲ್ಲಿನ ಅಮಿತ್ ಶಾ ವಿರುದ್ಧದ ಆರೋಪಗಳಿಗೆ ಬದ್ಧ ಎಂದ ರಾಹುಲ್ ಗಾಂಧಿ

ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಬೃಹತ್ ಮರ ಬಿದ್ದು ಇಬ್ಬರು ಮಹಿಳಾ ಕಾರ್ಮಿಕರು ದುರ್ಮರಣ

ಮುಂದಿನ ಸುದ್ದಿ
Show comments