Select Your Language

Notifications

webdunia
webdunia
webdunia
webdunia

ನಿನ್ನೆ ಭೇಟಿ, ಇಂದು ಡಿಕೆ ಶಿವಕುಮಾರ್ ವಿರುದ್ಧ ತೇಜಸ್ವಿ ಸೂರ್ಯ ಅಸಮಾಧಾನ

DCM DK Shivkumar

Sampriya

ಬೆಂಗಳೂರು , ಬುಧವಾರ, 29 ಅಕ್ಟೋಬರ್ 2025 (15:05 IST)
Photo Credit X
ಬೆಂಗಳೂರು: ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ಟನಲ್ ಯೋಜನೆ ಮಾಡುತ್ತಿಲ್ಲ. ಕಾರು ಇಲ್ಲ ಅಂದ್ರೆ ಹೆಣ್ಣು ಕೊಡಲ್ಲಂತಾ ಟನಲ್ ರಸ್ತೆ ಮಾಡುವುದಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆಂದು ಸಂಸದ ತೇಜಸ್ವಿ ಸೂರ್ಯ ಆಕ್ರೋಶ ಹೊರಹಾಕಿದ್ದಾರ. 

ಈಗ ಅರ್ಥ ಆಯ್ತು, ಟನಲ್ ಮಾಡ್ತಾ ಇರೋದು ಟ್ರಾಫಿಕ್ ಕಡಿಮೆ ಮಾಡೋಕೆ ಅಲ್ಲ. ಬದಲಾಗಿ ಸಾಮಾಜಿಕ ಪಿಡುಗು ದೂರ ಮಾಡೋಕೆ. ಹೆಣ್ಣು ಕೊಡದೇ ಇರೋದನ್ನ ತಪ್ಪಿಸೋಕೆ ಈ ಯೋಜನೆ ತರ್ತಿದ್ದಾರಾ ಎಂದು ಪ್ರಶ್ನೆ ಮಾಡಿದರು. 

ಟನಲ್ ರಸ್ತೆಯಲ್ಲಿ 4 ಲೇನ್ ರಸ್ತೆ ಇರುತ್ತೆ. ಎಕ್ಸಿಟ್ ಜಾಗದಲ್ಲಿ 4 ಲೇನ್‌ನ ಟ್ರಾಫಿಕ್ ಬಂದು ಸೇರೋದು 2 ಲೇನ್ ರಸ್ತೆಗೆ. ಅಲ್ಲಿ ಹೊಸ ಟ್ರಾಫಿಕ್ ಜಾಮ್ ಆಗುತ್ತೆ. ಈ ಥರ 22 ಕಡೆ ಎಕ್ಸಿಟ್‌ಗಳು ಟನಲ್ ರೋಡ್‌ಗಿದೆ. ಈ ಯೋಜನೆ ಮಾಡುವ ಮುನ್ನಾ ಪರಿಸರದ ಬಗ್ಗೆ ಅಧ್ಯಯನ ಮಾಡಿಲ್ಲ. 

ಹೆಚ್ಚು ಕಾರುಗಳನ್ನು ಸಾಗಿಸುವ ಯೋಜನೆಗಿಂತ ಹೆಚ್ಚು ಜನರನ್ನು ಸಾಗಿಸುವ ಯೋಜನೆ ಮಾಡಿ ಅಂದಿದ್ದೇವೆ. ರೈಲು ಆಧಾರಿತ ಸಂಚಾರ ವ್ಯವಸ್ಥೆ ಮಾಡಿ ಅಂದಿದ್ದೇವೆ, ಸಬರ್ಬನ್, ಮೆಟ್ರೋ, ಟ್ರಾಂಗಳು ನಗರಕ್ಕೆ ಬೇಕಿವೆ ಎಂದು ತಮ್ಮ ಅಭಿಪ್ರಾಯ ಹೊರಹಾಕಿದರು.

ಸಂಚಾರ ಸಮಸ್ಯೆ ಕಡಿಮೆಯಾಗಬೇಕೆಂದರೆ ಬೆಂಗಳೂರಿನಲ್ಲಿ 300 ಕಿಮೀವರೆಗೆ ಮೆಟ್ರೋ ಜಾಲ ಅಭಿವೃದ್ಧಿ ಪಡಿಸಲಿ. ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಟಿಕೆಟ್ ದರ ಗಗನ ಮುಟ್ಟಿದೆ. ಮೆಟ್ರೋ ಟಿಕೆಟ್ ದರ ಇಳಿಸಲು ಆಗ್ರಹಿಸಿದ್ದೇವೆ.

ಮೆಟ್ರೋ ಟಿಕೆಟ್ ದರ ಹೆಚ್ಚಿಸಿರುವುದರಿಂದ ಬೈಕ್, ಕಾರುಗಳಲ್ಲಿ ಕರ್ಚು ಕಮ್ಮಿ ಆಗುತ್ತೆ. ಮೆಟ್ರೋ ಟಿಕೆಟ್ ದರ ಜನ ಕಾರು ಬಿಟ್ಟು ಮೆಟ್ರೋ ಹತ್ತುವ ಹಾಗಿರಬೇಕು ಎಂದು ತಿಳಿಸಿದರು.


Share this Story:

Follow Webdunia kannada

ಮುಂದಿನ ಸುದ್ದಿ

Andhrapradesh Rain: ಮೊಂತಾ ಚಂಡಮಾರುತಕ್ಕೆ ನೆಲಕಚ್ಚಿದ ಮರಗಳು, ಬೆಳೆ ಹಾನಿ