Select Your Language

Notifications

webdunia
webdunia
webdunia
webdunia

ಖರ್ಗೆ ಕೋಟೆಯಲ್ಲಿ ಠಿಕಾಣಿ ಹೂಡಿದೋರು ಯಾರು?

ಖರ್ಗೆ ಕೋಟೆಯಲ್ಲಿ ಠಿಕಾಣಿ ಹೂಡಿದೋರು ಯಾರು?
ಕಲಬುರಗಿ , ಮಂಗಳವಾರ, 7 ಮೇ 2019 (18:02 IST)
ಬಿಸಿಲೂರು ಖರ್ಗೆಯವರ ಭದ್ರ ಕೋಟೆ. ಇಲ್ಲಿ ನಡೆಯುತ್ತಿರುವ ಉಪಚುನಾವಣೆಯಲ್ಲಿ ಕೈ ಪಡೆ ನಾಯಕರು ಭದ್ರವಾಗಿ ಠಿಕಾಣಿ ಹೂಡಿದ್ದಾರೆ.

ಚಿಂಚೋಳಿ ವಿಧಾನಸಭೆ ಉಪಚುನಾವಣೆಯಲ್ಲಿ ಕ್ಷೇತ್ರವನ್ನ ಪ್ರತಿಷ್ಠೆಯಾಗಿಸಿಕೊಂಡ ಮೈತ್ರಿ ಪಕ್ಷ ಹಾಗೂ ಬಿಜೆಪಿ ಭರ್ಜರಿ ಸಮಾವೇಶಗಳನ್ನು, ಸಭೆಗಳನ್ನು ನಡೆಸುತ್ತಿವೆ.

ಏತನ್ಮಧ್ಯೆ, ದೆಹಲಿ ಪ್ರವಾಸವನ್ನ ಮೊಟಕುಗೊಳಿಸಿ ಕಲಬುರಗಿಯಲ್ಲೆ ಠಿಕಾಣಿ ಹೂಡಲು ಮಲ್ಲಿಕಾರ್ಜುನ ಖರ್ಗೆ ನಿರ್ಧಾರ ಮಾಡಿದ್ದಾರೆ.

ನಿನ್ನೆ ನವದೆಹಲಿಗೆ ತೆರಳಬೇಕಿದ್ದ ಕೈ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಉಪಚುನಾವಣೆಗಾಗಿ ಪ್ರವಾಸ ರದ್ದು ಪಡಿಸಿದ್ದಾರೆ.  

ಆದರೆ ಬಿಜೆಪಿ ಹಲವು ನಾಯಕರು ಚಿಂಚೋಳಿಯಲ್ಲೆ ಮೊಕ್ಕಾಂ ಹೂಡಿದ್ದರಿಂದ ಪ್ರವಾಸ ರದ್ದು ಮಾಡಲು ಮತ್ತೊಂದು ಕಾರಣ ಎನ್ನಲಾಗಿದೆ.

ಲೋಕಸಭೆ ಚುನಾವಣೆಯಲ್ಲಿ ಉಮೇಶ್ ಜಾಧವ್ ತಮ್ಮ ಎದುರಾಳಿ ಹಾಗೂ ವಿಧಾನಸಭೆ ಉಪಚುನಾವಣೆಯಲ್ಲಿ ಅವರ ಪುತ್ರ ಅವಿನಾಶ್ ಜಾಧವ್ ಕಾಂಗ್ರೆಸ್ ವಿರುದ್ಧದ ಸ್ಪರ್ಧೆಯನ್ನ ಸವಾಲಾಗಿ ಸ್ವೀಕರಿಸಿದ್ದಾರೆ ಖರ್ಗೆ.

ಶತಾಯಗತಾಯ ಚಿಂಚೋಳಿ ಕ್ಷೇತ್ರವನ್ನ ತನ್ನ ತೆಕ್ಕೆಗೆ ಹಾಕಿಕೊಳ್ಳಲು ಭಾರಿ ಕಸರತ್ತು ನಡೆಸಿರುವ ಕೈ - ಕಮಲ ನಾಯಕರು ಕ್ಷೇತ್ರದಲ್ಲೇ ಠಿಕಾಣಿ ಹೂಡೋ ಮೂಲಕ ಮತಬೇಟೆ ಮುಂದುವರಿಸಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ನಿಮಗೆ ಇಷ್ಟವಾದ ತಳಿಯ ಮಾವಿನ ಹಣ್ಣು ಸಿಗುತ್ತಿಲ್ಲ ಎಂದು ಬೇಸರದಲ್ಲಿದ್ದೀರಾ? ಅದಕ್ಕೆ ಪರಿಹಾರ ಇಲ್ಲಿದೆ ನೋಡಿ