Webdunia - Bharat's app for daily news and videos

Install App

ಹನಿಟ್ರ್ಯಾಪ್, ಕೊಲೆ ಸುಪಾರಿಯ ಖಳನಾಯಕ ಯಾರು: ಆರ್‌ ಅಶೋಕ್ ಪ್ರಶ್ನೆ

Sampriya
ಶುಕ್ರವಾರ, 28 ಮಾರ್ಚ್ 2025 (15:58 IST)
ಬೆಂಗಳೂರು: ಮನೆಗೆ ಶಾಮಿಯಾನ ಹಾಕಲು ಬಂದಿದ್ದ ಇಬ್ಬರು ತನ್ನ ಮೇಲೆ  ಕೊಲೆಗೆ ಯತ್ನಿಸಿದ್ದು, ಕೊಲೆಗೆ ಸುಪಾರಿ ನೀಡಲಾಗಿದೆ ಎಂದು ಸಚಿವ ಕೆಎನ್‌ ರಾಜಣ್ಣ ಪುತ್ರ ವಿಧಾನ ಪರಿಷತ್ ಸದಸ್ಯ ಆರ್ ರಾಜೇಂದ್ರ ರಾಜಣ್ಣ ದೂರು ನೀಡಿದ್ದಾರೆ.

ಈ ಸಂಬಂಧ ವಿಪಕ್ಷ ನಾಯಕ ಆರ್‌ ಅಶೋಕ್ ಎಕ್ಸ್‌ನಲ್ಲಿ ಬರೆದುಕೊಂಡು, ಹನಿಟ್ರ್ಯಾಪ್ ಆಯ್ತು, ಈಗ ಕೊಲೆ ಸುಪಾರಿ ನೀಡಲಾಗಿದೆ ಎಂದು ತಮ್ಮದೇ ಪಕ್ಷದ ನಾಯಕ ಆರೋಪ ಮಾಡುತ್ತಿದ್ದಾರೆ. ಇದರ ಖಳನಾಯಕ ಯಾರೆಂಬುದು ಜನರಿಗೆ ಗೊತ್ತಾಗಲಿ ಎಂದು ಹೇಳಿದ್ದಾರೆ.

ಹನಿಟ್ರ್ಯಾಪ್ ಆಯ್ತು ಈಗ ಕೊಲೆ ಸುಪಾರಿ!

ಸಹಕಾರ ಸಚಿವ ಕೆಎನ್ ರಾಜಣ್ಣ ಅವರು ತಮ್ಮ ಮೇಲೆ ಹನಿಟ್ರ್ಯಾಪ್ ಪ್ರಯತ್ನ ಆಗಿದೆ ಎಂದು
ಸದನದಲ್ಲಿ ತಮ್ಮ ಸಹಾಯಕತೆ ತೋಡಿಕೊಂಡು ತನಿಖೆಗೆ ಮನವಿ ಮಾಡಿದ್ದ ಬೆನ್ನಲ್ಲೇ ಈಗ ಅವರ ಸುಪುತ್ರ, ವಿಧಾನ ಪರಿಷತ್ ಸದಸ್ಯ ಶ್ರೀ ರಾಜೇಂದ್ರ ರಾಜಣ್ಣ ಅವರು ತಮ್ಮ ಕೊಲೆಗೆ ಸುಪಾರಿ ನೀಡಲಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಸ್ವಾಮಿ ಸಿಎಂ ಸಿದ್ದರಾಮಯ್ಯನವರೇ, ತಮ್ಮ ನಾಲಾಯಕ್ ಕಾಂಗ್ರೆಸ್‌ ಸರ್ಕಾರದಲ್ಲಿ ಸಚಿವರು, ಶಾಸಕರು, ಅವರ ಕುಟುಂಬ ಸದಸ್ಯರಿಗೆ ರಕ್ಷಣೆ ಇಲ್ಲದ ಮೇಲೆ ಇನ್ನು ಜನಸಾಮಾನ್ಯರ ಗತಿ ಏನು?

ಹಿರಿಯ ಸಚಿವರನ್ನ ಬೆದರಿಸಿ, ಬ್ಲಾಕ್ ಮೇಲ್ ಮಾಡಿ, ಅವರ ಬಾಯಿ ಮುಚ್ಚಿಸುವ ಉದ್ದೇಶದಿಂದ ಇವೆಲ್ಲ ನಡೆಯುತ್ತಿದೆ ಎನ್ನುವುದು ಸ್ಪಷ್ಟವಾಗಿದೆ. ಇದರ ಹಿಂದೆ ಯಾರಿದ್ದಾರೆ ಎನ್ನುವ ಬಗ್ಗೆ ತನಿಖೆಯಾಗಲಿ, ಅಧಿಕಾರಕ್ಕಾಗಿ ಕರ್ನಾಟಕದ ರಾಜಕಾರಣವನ್ನ ಇಷ್ಟು ಕೀಳು ಮಟ್ಟಕ್ಕೆ ಕೊಂಡೊಯ್ಯುತ್ತಿರುವ ಆ ಖಳನಾಯಕ ಯಾರು ಎನ್ನುವುದು ಜನರಿಗೆ ಗೊತ್ತಾಗಲಿ ಎಂದು ಆಕ್ರೋಶ ಹೊರಹಾಕಿದ್ದಾರೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Air India ‌Flight Crash: ಮೃತ ಪ್ರತಿ ಪ್ರಯಾಣಿಕನ ಕುಟುಂಬಕ್ಕೆ ತಲಾ ₹1 ಕೋಟಿ ಘೋಷಿಸಿದ ಟಾಟಾ ಗ್ರೂಪ್

Air India Plane crash: ವಿಮಾನ ಅಪಘಾತಕ್ಕೆ ಇದೇ ಕಾರಣ: ಮಲ್ಲಿಕಾರ್ಜುನ ಖರ್ಗೆ ಸ್ಪೋಟಕ ಹೇಳಿಕೆ

Air India Plane crash: ಸುತ್ತಲೂ ಹೆಣಗಳ ರಾಶಿಯಿತ್ತು, ಬದುಕುಳಿದ ಏಕೈಕ ವ್ಯಕ್ತಿ ಬಿಚ್ಚಿಟ್ಟ ಭಯಾನಕ ಸತ್ಯ

Air India Flight Crash: ಗಂಡನ ಭೇಟಿಗಾಗಿ ಲಂಡನ್‌ಗೆ ಹೊರಟ್ಟಿದ್ದ ಮಹಿಳೆ ಸೇರಿದ್ದು ಮಸಣಕ್ಕೆ, ಕಣ್ಣೀರ ಕತೆ

Air India Crash: 10 ನಿಮಿಷ ಲೇಟ್‌, ಟ್ರಾಫಿಕ್‌ನಲ್ಲಿ ಸಿಲುಕಿ ಮಹಿಳೆ ಜಸ್ಟ್ ಬಚಾವ್‌

ಮುಂದಿನ ಸುದ್ದಿ
Show comments