Select Your Language

Notifications

webdunia
webdunia
webdunia
webdunia

ಕೆ ಆರ್ ಪುರ ಕ್ಷೇತ್ರದಲ್ಲಿ ಜನರ ಒಲವು ಯಾರ ಮೇಲಿದೆ...?

Who is the people's favorite in KR Pura constituency
bangalore , ಮಂಗಳವಾರ, 2 ಮೇ 2023 (15:13 IST)
ಕೆ ಆರ್ ಪುರ
ವಿಧಾನಸಭಾ ಚುನಾವಣೆಯ ಕಾವು ರಂಗೇರಿದೆ.ಪ್ರತಿ ಕ್ಷೇತ್ರದಲ್ಲಿಯೂ ಚುನಾವಣೆಯ ಪ್ರಚಾರ ಭರ್ಜರಿಯಾಗಿ ನಡೆಯುತ್ತಿದೆ.ಜಿದ್ದಾಜಿದ್ದಿನ ಕಳಗದಲ್ಲಿ ಕೆ ಆರ್ ಪುರ ಕ್ಷೇತ್ರವೂ ಒಂದು.
ಕೆ ಆರ್ ಪುರ ಕ್ಷೇತ್ರದಲ್ಲಿ ಬಿಜೆಪಿಯ ಅಲೆ ಜೋರಾಗಿದೆ.ಕೆ ಆರ್ ಪುರದ ಪ್ರತಿವಾರ್ಡ್ ನಲ್ಲಿಯೂ ಚುನಾವಣೆಯ ತಯಾರಿ ಒಂದು ಕಡೆ ಜೋರಿದ್ರೆ,ಮತ್ತೊಂದು ಕಡೆ ಪ್ರತಿಯೊಂದು ವಾರ್ಡ್ ಜನರ ಬಾಯಲ್ಲಿ ಬಿಜೆಪಿ ಬಿಜೆಪಿ ಅನ್ನುವ ಮಾತು ಬಿಟ್ಟು ಬೇರೆ ಯಾವ ಪದವು ಬರ್ತಿಲ್ಲ.ಅಷ್ಟರ ಮಟ್ಟಿಗೆ ಕೆ ಆರ್ ಪುರ ಕ್ಷೇತ್ರದಲ್ಲಿ ಬಿಜೆಪಿಯ ಬಲ ಇದೆ. ಈ ಬಾರಿಯೂ ಕೆ ಆರ್ ಪುರದ ಜನತೆ ಬಿಜೆಪಿ ಪರ ಇದ್ದು,ಬಿಜೆಪಿಗೆ ಮತಹಾಕುತ್ತೇವೆ. 100 ಕ್ಕೆ 100 ರಷ್ಟು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಹೇಳ್ತಿದ್ದಾರೆ.

ಎ.ನಾರಾಯಣಪುರದ ಕಾರ್ಪೋರೇಟರ್ ಆದ ಸುರೇಶ್ ರವರಂತೂ ಬೈರತಿ ಬಸವರಾಜ್ ರವರಿಗೆ ಆಪ್ತರು.ಅವರ ಮಾರ್ಗದರ್ಶನದಲ್ಲಿ ಹಲವು ಅಭಿವೃದ್ಧಿ ಕೆಲಸ ಮಾಡಿದ್ದಾರೆ.ಕ್ಷೇತ್ರದಲ್ಲಿ ಉತ್ತಮ ರಸ್ತೆ, ಕುಡಿಯಲು ನೀರಿನ ವ್ಯವಸ್ಥೆ ಎಲ್ಲವು ಕೂಡ ಮಾಡಿದ್ದಾರೆ.ಬಡವರ ಪರವಾಗಿ ಹಲವು ಅಭಿವೃದ್ಧಿ ಕೆಲಸ ಮಾಡಿದ್ದಾರೆ.ಪ್ರತಿಯೊಬ್ಬರ ಬಾಯಲ್ಲಿ  ಸುರೇಶ್  ಅನ್ನುವ ಮಾತು ಬರುತ್ತೆ. ಬಡತನದಿಂದ ಬಂದು ಸುರೇಶ್ ರವರು ಬಡವರಿಗಾಗಿ ಸಾಕಷ್ಟು ಕೆಲಸ ಮಾಡುತ್ತಾ.ಬಡವರ ಪರವಾಗಿ,ಅವರ ಶ್ರೇಯಸ್ಸಿಗಾಗಿ ಶ್ರಮಿಸುತ್ತಿದ್ದಾರೆ.ಸುರೇಶ್ ಅಂದ್ರೆ ಏರಿಯಾದ ಜನರಿಗೆ ಅಭಿಮಾನ.ಇವರಿಗಾಗಿ.ಇವರ ಅಭಿವೃದ್ಧಿ ಕೆಲಸ ನೋಡಿ ಜನರು ಈ ಬಾರಿ ಬಿಜೆಪಿ ಸರ್ಕಾರವನ್ನೇ ಅಧಿಕಾರಕ್ಕೆ ತರುತ್ತೇವೆ ಎಂದು ಹೇಳ್ತಿದ್ದಾರೆ

Share this Story:

Follow Webdunia kannada

ಮುಂದಿನ ಸುದ್ದಿ

ರಾಹುಲ್ ಗಾಂಧಿ ಯಂಗ್‌ಸ್ಟರ್: ಹೆಚ್.ಡಿ.ದೇವೇಗೌಡ