Select Your Language

Notifications

webdunia
webdunia
webdunia
webdunia

ಮತದಾರರನ್ನ ಸೆಳೆಯಲು ರಾಜಕೀಯ ಪಕ್ಷಗಳ ಬಿರುಸಿನ ಪ್ರಚಾರ

Violent campaigning by political parties to attract voters
bangalore , ಮಂಗಳವಾರ, 2 ಮೇ 2023 (14:20 IST)
ಮತದಾರರನ್ನ ಸೆಳೆಯಲು ರಾಜಕೀಯ ಪಕ್ಷಗಳು ಬಿರುಸಿನ ಪ್ರಚಾರ ನಡೆಸುತ್ತಿವೆ. ಇಂದು ಬೊಮ್ಮನಹಳ್ಳಿ ಯಲ್ಲಿ ಬಿಜೆಪಿ ಅಭ್ಯರ್ಥಿ ಸತೀಶ್ ರೆಡ್ಡಿ ಪಾದಯಾತ್ರೆ ನಡೆಸುವ ಮೂಲಕ ಮತಯಾಚನೆ ನಡೆಸಿದ್ರು. ಸಾವಿರಾರು ಕಾರ್ಯಕರ್ತರು, ಮುಖಂಡರು ವಿವಿಧ ವಾರ್ಡ್ಗಳ ಅಧ್ಯಕ್ಷ ರು ಭಾಗಿಯಾಗಿದ್ರು. ಅದರಲ್ಲೂ ವಿಶೇಷವಾಗಿ ಹೆಚ್ಚಾಗಿ ಹೊಂಗಸಂದ್ರ ಗ್ರಾಮದ ಕಾರ್ಯಕರ್ತರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ನಮ್ಮ ಮನೆಯ ಮಗ ಸತೀಶ್ ರೆಡ್ಡಿ ಅವರನ್ನು ಬಾರಿ ಮತಗಳ ಅಂತರದಿಂದ ಗೆಲ್ಲಿಸಿಕೊಳ್ಳುತ್ತೇವೆ ಇಲ್ಲಿ ಯಾವುದೇ ಪಕ್ಷದ ಅಭ್ಯರ್ಥಿ ಬಂದ್ರು ಗೆಲುವು ನಮ್ಮದೆ ಎಂದರು.ಇನ್ನೂ ಬಿಜೆಪಿ ಅಭ್ಯರ್ಥಿ ಸತೀಶ್ ರೆಡ್ಡಿ ಮಾತನಾಡಿ ನಾನು ಮಾಡಿರುವ ಅಭಿವೃದ್ಧಿ ಕೆಲಸಗಳೆ ನನಗೆ ಶ್ರೀ ರಕ್ಷೆ, ಮೊದಲ ಬಾರಿಗೆ ಪಾಲಿಕ ಚುನಾವಣೆಯಲ್ಲಿ ಎಂಟು ಅಭ್ಯರ್ಥಿ ಗಳನ್ನ ಗೆಲ್ಲಸಿದ್ದೆ, ಒಂದು ಎದುರಾಳಿ ಅಭ್ಯರ್ಥಿ ಇಲ್ಲದೆಯೇ ಅವಿರೋದವಾಗಿ ಆಯ್ಕೆ ಆಗಿದ್ದಾರೆ.  ಈಗಾಗಲೇ ಹಲವು ರ್ಯಾಲಿಗಳನ್ನ ಮಾಡಿದ್ದೇವೆ.ಪಾದಯಾತ್ರೆ ಮಾಡಿದ್ದೇವೆ ಇಲ್ಲಿ ಬಿಜೆಪಿ ಪಕ್ಷದ ಪರವಾಗಿ ಜನ ಒಲವು ಹೊಂದಿದ್ದಾರೆ ಇವತ್ತು ಕಾರ್ಮಿಕ ರ ದಿನಾಚರಣೆ ಅಂಗವಾಗಿ ವಿಶೇಷವಾಗದ ಜಾತ ನಡೆಸಿದೆವು ನಾವು ಮತ್ತೆ ಅಧಿಕ ಮತಗಳ ಅಂತರದಿಂದ ಗೆಲವು ಸಾಧಿಸುತ್ತೇವೆಂದು ಹೇಳಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಸುಧಾಕರ್ ಒಂದು ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿದ್ದಾರೆ : ಜಮೀರ್