Publish Date: Tue, 02 May 2023 (14:01 IST)
Updated Date: Thu, 04 May 2023 (14:06 IST)
ಬಾರೀ ಕುತೂಹಲ ಮೂಡಿಸಿರುವ ಕ್ಷೇತ್ರಗಳಲ್ಲಿ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ಕೂಡ ಒಂದು .ಕಾಂಗ್ರೆಸ್, ಬಿಜೆಪಿ ನಡುವೆ ಸ್ಪರ್ಧೆ ಜೋರಾಗಿಯೇ ಇದೆ. ನಿನ್ನೆ ಬೈಕ್ ರ್ಯಾಲಿ ನಡೆಸಿ ಸಾಕಾಷ್ಟು ಸೌಂಡ್ ಮಾಡಿದ್ದ ಕಾಂಗ್ರೆಸ್ ಇಂದು ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದ್ರು.ಮಂಗಮ್ಮನಪಾಳ್ಯ, ಎಳ್ಳುಕುಂಟೆ ಗ್ರಾಮಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮಾಪತಿ ಶ್ರೀನಿವಾಸ್ ಗೌಡ ನೂರಾರು ಬೆಂಬಲಿಗರ ಜತೆ ಮತಯಾಚನೆ ಮಾಡಿದ್ರು. ಬೆಂಬಲಿಗರು ಪಟಾಕಿ ಸಿಡಿಸಿ, ಹೂವಿನ ಹಾರ ಹಾಕಿ ಅದ್ದೂರಿಯಾಗಿ ಬರಮಾಡಿಕೊಂಡ್ರು. ಸಾಕಷ್ಟು ಯುವ ಜನತೆಯ ಆಶಾಕಿರಣವಾಗಿದ್ದಾರೆ ಈ ಬಾರಿ ನಮ್ಮ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನ ಬಾರಿ ಮತಗಳ ಅಂತರದಿಂದ ಗೆಲ್ಲಿಸುತ್ತೇವೆಂದು ಜಯಘೋಷಣೆಯನ್ನಕೂಗಿದ್ರುನಂತರ ಮಾತನಾಡಿದ ಉಮಾಪತಿ ಕ್ಷೇತ್ರದ ಜನತೆಯ ಆಶಿರ್ವಾದ ಈ ಬಾರಿ ನಮ್ಮ ಮೇಲಿದೆ,ಯಾರೇ ಏನೆ ಕುತಂತ್ರ ಮಾಡಿದ್ರು ನಮ್ಮ ಕಾರ್ಯಕರ್ತರನ್ನ ತಡೆಯಲು ಸಾಧ್ಯವಾಗುವುದಿಲ್ಲ ಗೆಲುವು ನಮಗೆ ಶತಸಿಧ್ದ ಯಾರೇನೇ ಆರೋಪ ಮಾಡಿದ್ರು ಅದಕ್ಕೆಲ್ಲ 13 ನೇ ತಾರೀಖು ಉತ್ತರ ಕೊಡುತ್ತೇನೆ ಎಂದ್ರು.