Select Your Language

Notifications

webdunia
webdunia
webdunia
webdunia

ಪ್ರಚಾರದ ವೇಳೆ ನಮಾಜ್ ಕೂಗು ಕೇಳಿ ಭಾಷಣ ನಿಲ್ಲಿಸಿದ ರಾಹುಲ್ ಗಾಂಧಿ

ಪ್ರಚಾರದ ವೇಳೆ ನಮಾಜ್ ಕೂಗು ಕೇಳಿ ಭಾಷಣ ನಿಲ್ಲಿಸಿದ ರಾಹುಲ್ ಗಾಂಧಿ
ತುಮಕೂರು , ಮಂಗಳವಾರ, 2 ಮೇ 2023 (13:51 IST)
ತುಮಕೂರು : ಜಿಲ್ಲೆಯ ತುರುವೆರೆಗೆ ಕೆರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬೆಮೆಲ್ ಕಾಂತರಾಜು ಪರ ರಾಹುಲ್ ಗಾಂಧಿ ಅಬ್ಬರದ ಪ್ರಚಾರ ನಡೆಸಿದರು. ಬಳಿಕ ಇಲ್ಲಿನ ಗುರುಭವನ ಮೈದಾನದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಬಿಜೆಪಿ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದರು.
 
ರಾಹುಲ್ ಗಾಂಧಿ ಭಾಷಣ ಮಾಡುತ್ತಿದ್ದ ವೇಳೆ ಸಮೀಪದಲ್ಲೇ ಇದ್ದ ಮಸೀದಿಯಲ್ಲಿ ನಮಾಜ್ ಮಾಡುತ್ತಿದ್ದರು. ಈ ವೇಳೆ ನಮಾಜ್ ಕೂಗು ಕೇಳಿಬರುತ್ತಿದ್ದಂತೆ ತಮ್ಮ ಭಾಷಣಕ್ಕೆ ಬ್ರೇಕ್ ಹಾಕಿದ್ದ ರಾಹುಲ್ ನಮಾಜ್ ಮುಗಿದ ಬಳಿಕ ಭಾಷಣ ಆರಂಭಿಸಿದರು. 

ಕಳೆದ ಬಾರಿ ನೀವು ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಲಿಲ್ಲ. ಆದ್ರೆ ಅವರು ಶಾಸಕರನ್ನ ಖರೀದಿ ಮಾಡಿ ಅಧಿಕಾರಕ್ಕೆ ಬಂದರು, ಈ ಮೂಲಕ ಲೋಕ ತಂತ್ರವನ್ನೇ ಹಾಳು ಮಾಡಿದರು. ಕಳೆದ 3 ವರ್ಷಗಳಲ್ಲಿ ಬಿಜೆಪಿ ಭ್ರಷ್ಟಾಚಾರ ಮಾಡಿದೆ. ಸಣ್ಣ ಸಣ್ಣ ಕೆಲಸಕ್ಕೂ 40 ಪರ್ಸೆಂಟ್ ಕಮಿಷನ್ ತೆಗೆದುಕೊಳ್ಳುತ್ತಿದ್ದಾರೆ. ಜನರಿಗೆ ಶಿಕ್ಷಣ, ಉದ್ಯೋಗ, ಆರೋಗ್ಯಕ್ಕೆ ಹಣ ನೀಡುವ ಬದಲು ನಿಮ್ಮ ಜೇಬಿಗೆ ಕತ್ತರಿ ಹಾಕಿದ್ದಾರೆ. ಇದು ಪ್ರಧಾನ ಮಂತ್ರಿಗೂ ಗೊತ್ತು ಎಂದು ಕುಟುಕಿದರು. 


Share this Story:

Follow Webdunia kannada

ಮುಂದಿನ ಸುದ್ದಿ

ಕಾಯ್ದೆಯನ್ನು ಹಿಂತೆಗೆದುಕೊಂಡ ತಮಿಳುನಾಡು ಸರ್ಕಾರ