Publish Date: Mon, 18 Nov 2019 (15:18 IST)
Updated Date: Mon, 18 Nov 2019 (15:20 IST)
ನಿರ್ಜನ ರಸ್ತೆಯಲ್ಲಿ ಒಂಟಿಯಾಗಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯರಿಗೆ ಸೆಕ್ಯುರಿಟಿ ಗಾರ್ಡ್ ವೊಬ್ಬ ಮಾಡಬಾರದ ಕೆಲಸ ಮಾಡುತ್ತಿದ್ದನು.
ಮಹಿಳೆಯರಿಗೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ ಕೆನರಾ ಬ್ಯಾಂಕ್ ನ ಸೆಕ್ಯುರಿಟಿ ಗಾರ್ಡ್ ದೀಪಕ್ ನಾಯಕ್ (23) ಎಂಬಾತನನ್ನು ಪೊಲೀಸರು ಬಂಧನ ಮಾಡಿದ್ದಾರೆ.
ಉಡುಪಿಯ ಪ್ರೆಸ್ ಕಾರ್ನರ್, ವಿದ್ಯಾರತ್ನ ನಗರ, ಈಶ್ವರ ನಗರ, ಪೆರಂಪಳ್ಳಿ ರಸ್ತೆ ಮತ್ತಿತರರ ಕಡೆ ಒಬ್ಬಂಟಿಯಾಗಿ ಹೋಗುತ್ತಿದ್ದ ಮಹಿಳೆಯರನ್ನು ಟಾರ್ಗೆಟ್ ಮಾಡುತ್ತಿದ್ದ ಸಣ್ಣಕ್ಕಿ ಬೆಟ್ಟುವಿನ ನಿವಾಸಿ ದೀಪಕ್ ಕಿರುಕುಳ ನೀಡುತ್ತಿದ್ದನು.
ಕಾಮುಕ ಆರೋಪಿಯನ್ನ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.