Publish Date: Fri, 15 Nov 2019 (09:47 IST)
Updated Date: Fri, 15 Nov 2019 (09:48 IST)
ಬೆಂಗಳೂರು : ಪ್ರಶ್ನೆ : ನಾನು 27 ವರ್ಷದ ಮಹಿಳೆ. ಒಂದೂವರೆ ವರ್ಷದ ಹಿಂದೆ ಮದುವೆಯಾದೆ. ನನ್ನ ಪತಿ ತುಂಬಾ ಆಪ್ತ ಸ್ನೇಹಿತರನ್ನು ಹೊಂದಿದ್ದಾರೆ. ಅವರು ಆಗಾಗ ತಮ್ಮ ಸ್ನೇಹಿತರ ಬಳಿ ತನ್ನ ಜೊತೆ ಬಂದಿರುವಂತೆ ಕೇಳಿಕೊಳ್ಳುತ್ತಾರೆ. ಹಾಗೇ ಮನೆಗೆ ಅವರ ಸ್ನೇಹಿತರು ಬಂದರೆ ನನ್ನನ್ನ ಬೇರೆ ಕೋಣೆಯಲ್ಲಿ ಮಲಗಲು ಹೇಳಿ ಅವರು ತಮ್ಮ ಸ್ನೇಹಿತರ ಜೊತೆ ನಮ್ಮ ಕೋಣೆಯಲ್ಲಿ ಮಲಗುತ್ತಾರೆ. ಇದರಿಂದ ನನ್ನ ಪತಿ ಸಲಿಂಗಕಾಮಿ ಎಂಬ ಅನುಮಾನ ನನಗೆ ಉಂಟಾಗಿದೆ. ಇದನ್ನು ತಿಳಿದುಕೊಳ್ಳವುದು ಹೇಗೆ?
ಉತ್ತರ : ನಿಮಗೆ ಈ ಬಗ್ಗೆ ಅನುಮಾನವಿರುವುದರಿಂದ ಅದನ್ನು ತಕ್ಷಣ ನಿವಾರಿಸಿಕೊಳ್ಳುವುದು ಉತ್ತಮ. ಆದಕಾರಣ ನೀವು ನಿಮ್ಮ ಪತಿಯ ಜೊತೆ ಮಾತನಾಡಿ ಅದನ್ನು ತಿಳಿದುಕೊಳ್ಳಿ. ಒಂದು ವೇಳೆ ನಿಮ್ಮ ಅನುಮಾನ ನಿಜವಾಗಿದ್ದರೆ ಇದು ಸರಿಯಲ್ಲ, ಅದನ್ನು ಮುಂದುವರಿಸಬಾರದೆಂದು ಹೇಳಿ. ಹಾಗೇ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯಿರಿ.