Publish Date: Fri, 08 Dec 2017 (15:03 IST)
Updated Date: Fri, 08 Dec 2017 (15:07 IST)
ಬೆಂಗಳೂರು: ಖ್ಯಾತ ಪತ್ರಕರ್ತ ರವಿಬೆಳಗೆರೆ ತನ್ನ ಸಹೋದ್ಯೋಗಿ ಸುನಿಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ಕೊಟ್ಟಿದ್ದರು ಎಂಬ ಭಯಾನಕ ಸತ್ಯವೊಂದು ಎಸ್ ಐಟಿ ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಇದರ ಕುರಿತು ಸುನಿಲ್ ಹೇಳಿದ್ದೇನು ಗೊತ್ತಾ…?
‘ಪೊಲೀಸರು ವಿಷಯ ತಿಳಿಸಿದಾಗ ನನಗೆ ಶಾಕ್ ಆಗಿತ್ತು. ಈಗ ಹಳೆಯ ಸಂಗತಿಗಳನ್ನು ನೆನಪಿಸಿಕೊಂಡ್ರೆ ನಿಜ ಅನಿಸುತ್ತೆ’ ಎಂದು ಸುನಿಲ್ ಹೇಳಿದ್ದಾರೆ. ಇದಲ್ಲದೇ, ಸುನಿಲ್ ಮನೆ ಬಳಿ ಕೆಲ ಅನಾಮಿಕರು ಬಂದು ಹೋಗಿದ್ದಾರಂತೆ.
ರವಿ ಬೆಳಗೆರೆ ಮರಳಿ ಪತ್ರಿಕೆಗೆ ಕೆಲಸಕ್ಕೆ ಬಾ ಎಂದು ಸುನಿಲ್ ಅನ್ನು ಕರೆದಿದ್ದರಂತೆ. ನೀನು ಒಳ್ಳೆಯ ಪತ್ರಕರ್ತ, ನಿನ್ನಂಥ ಬರಹಗಾರರು ಬೇಕು, ಪತ್ರಿಕೆಯನ್ನು ಸರಿಯಾಗಿ ನಡೆಸುವವರಿಲ್ಲ ಎಂದು ಹೇಳಿಕೊಂಡಿದ್ದಾರಂತೆ. ಅದು ಅಲ್ಲದೇ, ಬೆಳಗೆರೆ ಅವರು ಅನೇಕ ಬಾರಿ ಸುನಿಲ್ ಅನ್ನು ಕಚೇರಿಗೆ ಕರೆದಿದ್ದರು ಸುನಿಲ್ ಹಲವು ಬಾರಿ ಹೋಗಿರಲಿಲ್ಲವಂತೆ. 2016ರ ಡಿಸೆಂಬರ್ 24, ಶನಿವಾರದಂದು ಸುನಿಲ್ ಅನ್ನು ಕಚೇರಿಗೆ ಬರಲು ರವಿಬೆಳಗೆರೆ ಹೇಳಿದ್ದರಂತೆ. ಆದರೆ ಸುನಿಲ್ ಅಲ್ಲಿ ಹೋದಾಗ ಯಾರೂ ಕೂಡ ಇರಲಿಲ್ಲವಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ