Select Your Language

Notifications

webdunia
webdunia
webdunia
webdunia

ಪತ್ರಕರ್ತ ರವಿಬೆಳಗರೆಯಿಂದ ಸಹೋದ್ಯೋಗಿ ಹತ್ಯೆಗೆ ಸುಪಾರಿ ಸಿಸಿಬಿ ವಶದಲ್ಲಿ ರವಿಬೆಳಗೆರೆ

ಪತ್ರಕರ್ತ ರವಿಬೆಳಗರೆಯಿಂದ ಸಹೋದ್ಯೋಗಿ  ಹತ್ಯೆಗೆ ಸುಪಾರಿ ಸಿಸಿಬಿ ವಶದಲ್ಲಿ ರವಿಬೆಳಗೆರೆ
ಬೆಂಗಳೂರು , ಶುಕ್ರವಾರ, 8 ಡಿಸೆಂಬರ್ 2017 (14:30 IST)
ಬೆಂಗಳೂರು: ಖ್ಯಾತ ಪತ್ರಕರ್ತನಿಂದ ಮತ್ತೊಬ್ಬ ಪ್ರತಕರ್ತನ ಕೊಲೆಗೆ ಸುಪಾರಿ ಕೊಟ್ಟ ಪ್ರಕರಣವೊಂದು ಎಸ್ ಐಟಿ ತನಿಖೆಯಿಂದ ಹೊರಬಿದ್ದಿದೆ. ಹಾಯ್ ಬೆಂಗಳೂರು ಪತ್ರಿಕೆಯ ಗೌರವ ಸಂಪಾದಕ ರವಿ ಬೆಳಗೆರೆ ತನ್ನ ಸಹೋದ್ಯೋಗಿ ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ಕೊಟ್ಟಿದ್ದರು. ಪತ್ರಕರ್ತ ರವಿಬೆಳಗೆರೆ ಈಗ ಸಿಸಿಬಿ ವಶದಲ್ಲಿದ್ದಾರೆ. ತನಿಖಾಧಾರಿಗಳಿಂದ ವಿಚಾರಣೆ ನಡೆಯುತ್ತಿದೆ.


ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಪತ್ರಕರ್ತ ರವಿ ಬೆಳಗರೆ ಅವರೇ ಬಂದೂಕು ನೀಡಿದ್ದಾರೆ ಎಂದು ಹಂತಕರು ಎಸ್ ಐಟಿ ಅವರ ಮುಂದೆ ಮಹತ್ವರವಾದ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ಸುಪಾರಿ ಪಡೆದು ಆಗಸ್ಟ್ 28ರಂದು ಸುನಿಲ್ ಮನೆಗೆ ತೆರಳಿದ್ದ ಹಂತಕರು, ಸಿಸಿಟಿವಿ ನೋಡಿ ವಾಪಸ್ ಬಂದಿದ್ದರು. ಹಂತಕರಾದ ಶಶಿಧರ್ ಮುಂಡಾಧರ್ ಮತ್ತು ಸ್ನೇಹಿತರು ವಿಜಯಪುರ ಮೂಲದವರು.


ವೈಯಕ್ತಿಕ ದ್ವೇಷದಿಂದ ರವಿ ಬೆಳಗರೆ ಅವರು ಸುನಿಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ್ದರು. ಸಿಸಿಬಿ ಎಸಿಪಿ ಸುಬ್ರಹ್ಮಣ್ಯ ನೇತೃತ್ವದ 12 ಪೊಲೀಸರ ತಂಡದಿಂದ ದಾಳಿ ನಡೆಸಲಾಗಿದೆ. ವಾರೆಂಟ್ ಪಡೆದು ಸಿಸಿಬಿ  ಬೆಳಗರೆಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ರವಿಬೆಳಗರೆ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ನಾಯಕರು ಹರಾಮ್‌ಕೋರರು: ಉಮೇಶ್ ಕತ್ತಿ