Select Your Language

Notifications

webdunia
webdunia
webdunia
webdunia

ಕೊರೊನಾ ತಡೆಗೆ ಈ ವಿಶ್ವವಿದ್ಯಾಲಯ ಮಾಡುತ್ತಿರೋದೇನು?

ಕೊರೊನಾ ತಡೆಗೆ ಈ ವಿಶ್ವವಿದ್ಯಾಲಯ ಮಾಡುತ್ತಿರೋದೇನು?
ದಾವಣಗೆರೆ , ಶನಿವಾರ, 4 ಏಪ್ರಿಲ್ 2020 (14:10 IST)
ಕೊರೊನಾ ವೈರಸ್‌ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ವಿಶ್ವವಿದ್ಯಾಲಯ ಅಂಥ ಕೆಲಸ ಮಾಡುತ್ತಿದೆ.

ಕೊರೊನಾ ವೈರಸ್‌ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ದಾವಣಗೆರೆ ವಿಶ್ವವಿದ್ಯಾಲಯ ಹಾಗೂ ಸಂಯೋಜಿತ ಕಾಲೇಜುಗಳಲ್ಲಿ ಜಾಗೃತ ದಳವನ್ನು ರಚಿಸಲಾಗಿದ್ದು, ಮನೆಯಿಂದಲೇ ಕೊರೊನಾ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ.
ಕುಲಪತಿ ಅಧ್ಯಕ್ಷತೆಯಲ್ಲಿ ವಿಶ್ವವಿದ್ಯಾಲಯ ಜಾಗೃತ ದಳ ಹಾಗೂ ಆಯಾ ಕಾಲೇಜುಗಳ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ಕಾಲೇಜು  ಜಾಗೃತ ದಳವನ್ನು ರಚಿಸಲಾಗಿದೆ.

ವಿಶ್ವವಿದ್ಯಾಲಯ ಹಾಗೂ ಕಾಲೇಜು ವ್ಯಾಪ್ತಿಯ ಗ್ರಾಮವನ್ನು ದತ್ತು ಪಡೆದು ಅಥವಾ ಈಗಾಗಲೇ ದತ್ತು ಪಡೆದಿರುವ ಗ್ರಾಮಗಳಲ್ಲಿ  ವಿಡಿಯೊ, ವಾಟ್ಸ್‌ಆ್ಯಪ್‌ ಗ್ರೂಪ್‌ಗಳ ಮೂಲಕ ಆರೋಗ್ಯ ಜಾಗೃತಿ ಮೂಡಿಸುವುದು. ಕೊರೊನಾ ವೈರಸ್‌ ಹರಡದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ಸಲಹೆ ನೀಡುವುದು.

ದುರ್ಬಲ ವರ್ಗದವರಿಗೆ ಮಾಸ್ಕ್‌ ಹಾಗೂ ಹ್ಯಾಂಡ್‌ ಸ್ಯಾನಿಟೈಸರ್‌ ಒದಗಿಸುವುದು ಯಾವುದೇ ವ್ಯಕ್ತಿಯಲ್ಲಿ ಕೆಮ್ಮು, ನೆಗಡಿ, ಜ್ವರದಂತಹ ಲಕ್ಷಣ ಕಂಡು ಬಂದರೆ ಆರೋಗ್ಯ ಇಲಾಖೆಯ ಗಮನಕ್ಕೆ ತರುವ‌ ಕೆಲಸಗಳನ್ನು ಈ ಜಾಗೃತ ದಳ ಮಾಡಲಿದೆ ಎಂದು
ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶರಣಪ್ಪ ಹಲಸೆ ತಿಳಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಣೆಗೆ ಎದುರಾಗಿದೆ ದೊಡ್ಡ ತೊಂದರೆ