Select Your Language

Notifications

webdunia
webdunia
webdunia
webdunia

ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಣೆಗೆ ಎದುರಾಗಿದೆ ದೊಡ್ಡ ತೊಂದರೆ

ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಣೆಗೆ ಎದುರಾಗಿದೆ ದೊಡ್ಡ ತೊಂದರೆ
ಬೆಂಗಳೂರು , ಶನಿವಾರ, 4 ಏಪ್ರಿಲ್ 2020 (14:02 IST)
ಡಾ. ಬಾಬು ಜಗಜೀವನ್ ರಾಮ್ ಜನ್ಮ ದಿನಾಚರಣೆ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಜನ್ಮ ದಿನಾಚರಣೆಯನ್ನು ತುಂಬಾ ಸರಳವಾಗಿ ಆಚರಿಸುವಂತೆ ಸರಕಾರ ಸೂಚಿಸಿದೆ.

ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವುದನ್ನು ನಿಯಂತ್ರಣಗೊಳಿಸಲು  ರಾಷ್ಟ್ರದಾದ್ಯಂತ ಲಾಕ್ ಡೌನ್ ಅನುಷ್ಠಾನ ದಲ್ಲಿದ್ದು, ಸೆಕ್ಷನ್ 144 ಜಾರಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಏ.5 ರಂದು ಡಾ. ಬಾಬು ಜಗಜೀವನ್ ರಾಮ್ ಜನ್ಮ ದಿನಾಚರಣೆ ಹಾಗೂ ಏ.14 ರಂದು ಡಾ. ಬಿ.ಆರ್. ಅಂಬೇಡ್ಕರ್ ಜನ್ಮ ದಿನಾಚರಣೆಯನ್ನು ತುಂಬಾ ಸರಳವಾಗಿ ಹೆಚ್ಚಿನ ಸಂದಣಿ ಸೇರದಂತೆ ಆಚರಿಸಬೇಕು ಎಂದು  ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ತಿಳಿಸಿದ್ದಾರೆ.
webdunia

ಕೊರೊನಾ ವೈರಸ್ ನಿಯಂತ್ರಣ ಕ್ಕಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅನಿವಾರ್ಯ ವಾಗಿದೆ. ಈ ಹಿನ್ನೆಲೆಯಲ್ಲಿ ಡಾ. ಬಾಬು ಜಗಜೀನ್ ರಾಮ್ ಜಯಂತಿ ಹಾಗೂ ಡಾ. ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮವನ್ನು ಅತ್ಯಂತ ಸರಳವಾಗಿ ಆಚರಿಸಬೇಕು. ಸಾರ್ವಜನಿಕರು, ಸಂಘಟನೆಗಳು, ಸಂಘ ಸಂಸ್ಥೆಗಳ  ಪದಾಧಿಕಾರಿಗಳು, ಈ ಮಹಾನ್ ಚೇತನರ  ಅಭಿಮಾನಿಗಳು , ಅನುಯಾಯಿಗಳು ಸಹಕರಿಸಿ. ಸರಳವಾಗಿ ಜನ್ಮದಿನಾಚರಣೆಯನ್ನು ಆಚರಿಸಬೇಕು ಎಂದು ಉಪಮುಖ್ಯಮಂತ್ರಿ ಮನವಿ ಮಾಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಮಸೀದಿಯಲ್ಲೇ ನಮಾಜ್ ಮಾಡಿದವರ ಬಂಧನ