Publish Date: Sat, 04 Apr 2020 (13:58 IST)
Updated Date: Sat, 04 Apr 2020 (13:59 IST)
ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಹೋರಾಟ ನಡೆಯುತ್ತಿದ್ದು, ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿದೆ. ಲಾಕ್ ಡೌನ್ ಉಲ್ಲಂಘಿಸಿ ನಮಾಜ್ ಮಾಡಿದವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಮಸೀದಿಯಲ್ಲಿ ನಮಾಜ್ ನಲ್ಲಿ ತೊಡಗಿದ್ದ 15 ಜನರನ್ನು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.
ಉತ್ತರ ಕನ್ನಡದ ಮುಂಡಗೋಡಿನ ಎರಡು ಮಸೀದಿಗಳಲ್ಲಿ ಸಾಮೂಹಿಕ ನಮಾಜ್ ಮಾಡಲಾಗುತ್ತಿತ್ತು. ಒಬ್ಬರ ಪಕ್ಕದಲ್ಲಿ ಮತ್ತೊಬ್ಬರು ಕುಳಿತುಕೊಂಡು ನಮಾಜ್ ಮಾಡುತ್ತಿದ್ದವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.