Publish Date: Thu, 07 May 2020 (19:56 IST)
Updated Date: Thu, 07 May 2020 (19:59 IST)
ಸ್ವತಃ ಹೋಮ್ ಕ್ವಾರಂಟೈನ್ ಗೆ ಒಳಗಾಗಿದ್ದ ಸಚಿವರೊಬ್ಬರು ವೀಕ್ಷಣಾವಧಿ ಪೂರ್ಣಾವಧಿಗೊಳಿಸಿದ್ದಾರೆ.
ಪ್ರವಾಸೋದ್ಯಮ ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಸಿ. ಟಿ. ರವಿ ತಮ್ಮ ವೀಕ್ಷಣಾವಧಿಯನ್ನು ಮುಗಿಸಿದ್ದಾರೆ.
14 ದಿನಗಳಿಂದ ಬಸವನಹಳ್ಳಿಯಲ್ಲಿ ಇರುವ ತಮ್ಮ ನಿವಾಸದಲ್ಲಿ ಸಚಿವರು ಸೆಲ್ಫ್ ಕ್ವಾರಂಟೈನ್ ಗೆ ಒಳಗಾಗಿದ್ದರು.
ಚಿಕ್ಕಮಗಳೂರಿನಲ್ಲಿ ಈ ಕುರಿತು ಮಾತನಾಡಿದ ಸಿ.ಟಿ.ರವಿ, ಸೆಲ್ಫ್ ಕ್ವಾರಂಟೈನ್ ಮುಗಿಸಿದ್ದೇನೆ. ಇನ್ನುಮುಂದೆ ಜನರ ಕೆಲಸದಲ್ಲಿ ಸಕ್ರಿಯವಾಗಿರುತ್ತೇನೆ. ಕೊರೊನಾ ವಿಚಾರದಲ್ಲಿ ನಾನು ಕೂಡ ಜಾಗೃತೆಯಿಂದ ಇರುತ್ತೇನೆ ಎಂದು ತಿಳಿಸಿದ್ದಾರೆ.