ಜೆಡಿಎಸ್ ಮಾಜಿ ಶಾಸಕ ವೈ.ಎಸ್.ವಿ.ದತ್ತ ತಮ್ಮನಿವಾಸದಿಂದಲೇ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪಾಠ ಮಾಡಿದ್ದಾರೆ.
									
										
								
																	
 ಚಿಕ್ಕಮಗಳೂರು ಜಿಲ್ಲೆಯ  ಕಡೂರು  ಕ್ಷೇತ್ರದ ಮಾಜಿ  ಶಾಸಕ ಜೆ .ಡಿ .ಎಸ್ . ಮುಖಂಡರಾದ  ವೈ .ಎಸ್ .ವಿ .ದತ್ತ  ಅವರು  ತಮ್ಮ  ನಿವಾಸದಿಂದಲೇ SSLC   ವಿದ್ಯಾರ್ಥಿಗಳಿಗೆ  ಫೇಸ್ಬುಕ್ ಮೂಲಕ ಕೋಚಿಂಗ್ ತರಗತಿಗಳನ್ನು ಪ್ರಾರಂಭ ಮಾಡಿದ್ದಾರೆ.
									
			
			 
 			
 
 			
					
			        							
								
																	ಮೂಲತಃ ಸಾಕಷ್ಟು  ವರ್ಷ  ಶಿಕ್ಷಕರಾಗಿ  ಕೆಲಸ  ಮಾಡಿರುವ  ದತ್ತ  ಅವರು, ಕೊರೊನಾ  ಸಂಕಷ್ಟದ ಸಮಯದಲ್ಲಿ   ಪಾಠ  ಹೇಳಿಕೊಟ್ಟು  ಹತ್ತನೇ  ತರಗತಿ  ವಿದ್ಯಾರ್ಥಿಗಳಿಗೆ  ನೆರವಾಗಿದ್ದಾರೆ. ಕಳೆದ  2 ದಿನಗಳಿಂದ  ಪ್ರತಿ  ರಾತ್ರಿ  7.30 ರಿಂದ 8.30 ರವರೆಗೆ  ಒಂದು  ಗಂಟೆ  ತರಗತಿ  ನಡೆಸುತ್ತಿರುವ  ಅವರು  ಫೇಸ್ಬುಕ್  ಲೈವ್  ನಲ್ಲಿ  ಗಣಿತ  ಮತ್ತು  ವಿಜ್ಞಾನ ಭೋದಿಸುತ್ತಿದ್ದಾರೆ.
									
										
								
																	ತರಗತಿ  ಮಾಡುತ್ತಿರುವ  ಬಗ್ಗೆ  ಮಾತನಾಡಿದ  ಅವರು,  ಕೊರೊನಾ  ಹಿನ್ನಲೆ ತಡವಾಗಿ   ಪರೀಕ್ಷೆ ಬರೆಯತ್ತಿರುವ ಹತ್ತನೆ  ತರಗತಿ  ವಿದ್ಯಾರ್ಥಿಗಳಿಗೆ ಉಪಯೋಗವಾಗಲೆಂದು ಶಿಕ್ಷಣ ಸಚಿವ  ಸುರೇಶ್  ಕುಮಾರ್  ಅವರೊಂದಿಗೆ ಚರ್ಚಿಸಿ ತರಗತಿ  ಆರಂಭ  ಮಾಡಿದ್ದೇನೆ.  ಇದು  ಪ್ರತಿ  ನಿತ್ಯ  ಸಂಜೆ  ಪರೀಕ್ಷೆ  ಆರಂಭವಾಗುವವರೆಗು  ನಡೆಯಲಿದೆ  ಎಂದು  ತಿಳಿಸಿದ್ದಾರೆ.
									
											
							                     
							
							
			        							
								
																	ಇನ್ನು ದತ್ತ  ಅವರ  ಫೇಸ್ಬುಕ್  ತರಗತಿಯನ್ನು  ಕೇವಲ  2 ದಿನದಲ್ಲಿ 40 ಸಾವಿರ ವಿದ್ಯಾರ್ಥಿಗಳು  ವೀಕ್ಷಣೆ  ಮಾಡಿದ್ದು,  17 ಸಾವಿರ  ವಿದ್ಯಾರ್ಥಿಗಳು  ಶೇರ್  ಮಾಡಿದ್ದಾರೆ. ಇದು  ನೀರಿಕ್ಷೆಗೂ  ಮೀರಿ  ಆನ್  ಲೈನ್ ತರಗತಿ  ಯಶಸ್ವಿಯಾಗಿ  ಮಕ್ಕಳನ್ನು  ತಲುಪಿದೆ.