Select Your Language

Notifications

webdunia
webdunia
webdunia
webdunia

ಡಿಸಿ ಕೈವಾಡ : ಹೆತ್ತವರ ಮಡಿಲು ಸೇರಿದ ರಾಜಸ್ಥಾನದ ಬಾಲಕರು

ಡಿಸಿ ಕೈವಾಡ : ಹೆತ್ತವರ ಮಡಿಲು ಸೇರಿದ ರಾಜಸ್ಥಾನದ ಬಾಲಕರು
ಧಾರವಾಡ , ಗುರುವಾರ, 7 ಮೇ 2020 (18:06 IST)
ಲಾಕ್ ಡೌನ್ ಜಾರಿಯಿಂದಾಗಿ ಕಳೆದ ಸುಮಾರು ಒಂದೂವರೆ ತಿಂಗಳಿನಿಂದ ಹೆತ್ತ ಪಾಲಕರನ್ನು ಸೇರಲಾಗದೇ ಇದ್ದ ಬಾಲಕರನ್ನು ಡಿಸಿ ಯವರು ಒಂದುಗೂಡಿಸಿದ್ದಾರೆ.

ಹುಬ್ಬಳ್ಳಿಯ ಮರಾಠಗಲ್ಲಿಯ ಕೋಳಿಪೇಟೆಯ  ಪರಿಚಯದವರೊಬ್ಬರ  ಮನೆಯಲ್ಲಿ ಆಶ್ರಯ ಪಡೆದಿದ್ದ ರಾಜಸ್ಥಾನದ ಇಬ್ಬರು ಅಪ್ರಾಪ್ತ ಮಕ್ಕಳು ಅವರ ಪಾಲಕರನ್ನು ಸೇರಲು ಜಿಲ್ಲಾಧಿಕಾರಿ ದೀಪಾ ಚೋಳನ್ ನೆರವಿನ ಹಸ್ತ ಚಾಚಿದ್ದಾರೆ.  ರಾಜಸ್ಥಾನ ಸರ್ಕಾರದ ಅಧಿಕಾರಿಗಳಿಗೆ ಅಧಿಕೃತವಾಗಿ ಮಾಹಿತಿ ನೀಡಿ, ಅಗತ್ಯ ವಾಹನ ಪಾಸುಗಳನ್ನು ಒದಗಿಸಿಕೊಟ್ಟಿದ್ದಾರೆ.

ಕಳೆದ ಸುಮಾರು ಐವತ್ತು ದಿನಗಳ ಹಿಂದೆ ತಾಲಸಾರಾಮ್  ದಂಪತಿಗಳು ರಾಜಸ್ಥಾನದ  ಸಿರೋಹಿ ಜಿಲ್ಲೆಯ ತಮ್ಮ ಸ್ವಗ್ರಾಮ  ಮೆಮಂಡ್ವಾರಾಕ್ಕೆ ಅನಿವಾರ್ಯ ಕಾರಣಗಳಿಂದಾಗಿ ತೆರಳಿದ್ದರು. ಹಣಕಾಸಿನ ಮುಗ್ಗಟ್ಟಿನಿಂದಾಗಿ ಮಕ್ಕಳನ್ನು ಕರೆದುಕೊಂಡು‌ ಹೋಗಲು ಸಾಧ್ಯವಾಗದೇ ತಾವು ಬಾಡಿಗೆ ಇರುವ ಮನೆಯ ಮಾಲೀಕರ ಬಳಿಗೆ ಮಕ್ಕಳನ್ನು ಒಪ್ಪಿಸಿ ತೆರಳಿದ್ದರು.

ಕೊರೊನಾ ನಿಯಂತ್ರಣಕ್ಕಾಗಿ ದಿಡೀರನೇ ಲಾಕ್ ಡೌನ್ ಜಾರಿಯಾದ ಪರಿಣಾಮವಾಗಿ ಮರಳಿ ಹುಬ್ಬಳ್ಳಿಗೆ ಬರಲು ತಾಲಸಾರಾಮ್ ದಂಪತಿಗಳಿಗೆ ಸಾಧ್ಯವಾಗಿರಲಿಲ್ಲ. 10 ವರ್ಷದ ಬಾಲಕಿ ರೋಮುಕುಮಾರಿ ಹಾಗೂ 8 ವರ್ಷದ ಪೋಸುಕುಮಾರಿ ತಮ್ಮ ಪಾಲಕರನ್ನು ಸೇರಲು ಕಾತುರರಾಗಿದ್ದಾರೆ.

ಮಕ್ಕಳನ್ನು ತಮ್ಮ ಬಳಿ ಇರಿಸಿಕೊಂಡಿದ್ದ ರಮೇಶ್ ರಾವಲ್ ಅವರು ಸ್ವತಃ ತಮ್ಮ ಕಾರಿನ ಮೂಲಕ ಮಕ್ಕಳನ್ನು ರಾಜಸ್ಥಾನಕ್ಕೆ ಬಿಟ್ಟು ಬರಲು ಮುಂದೆ ಬಂದಾಗ, ತಹಸೀಲ್ದಾರರು  ಮುತುವರ್ಜಿ ವಹಿಸಿ  ಅಗತ್ಯ ಪರವಾನಗಿಯ ಏರ್ಪಾಡು ಮಾಡಿದರು. ಮಾರ್ಗಮಧ್ಯೆ ಆಹಾರ, ಸೂರತ್ ನಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲು ಅಲ್ಲಿನ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಹುಣ್ಣಿಮೆ ದಿನ ಮೂವರಿಗೆ ವಕ್ಕರಿಸಿದ ಕೊರೊನಾ