Select Your Language

Notifications

webdunia
webdunia
webdunia
webdunia

ವಿಷಾನಿಲ ದುರಂತ - ಸಹಾಯವಾಣಿ ಆರಂಭಿಸಿದ ಡಿಸಿಎಂ

ವಿಷಾನಿಲ ದುರಂತ - ಸಹಾಯವಾಣಿ ಆರಂಭಿಸಿದ ಡಿಸಿಎಂ
ರಾಯಚೂರು , ಗುರುವಾರ, 7 ಮೇ 2020 (18:17 IST)
ಆಂಧ್ರ ಪ್ರದೇಶದ ವಿಶಾಖಪಟ್ಟಣದ ಸಮೀಪ ವಿಷಾನಿಲ ಸೋರಿಕೆ ಪ್ರಕರಣದಿಂದ ಅಪಾರ ಸಾವುನೋವು ಉಂಟಾಗಿದೆ.

ಇದು ತೀರಾ ದುರ್ದೈವದ ಘಟನೆಯಾಗಿದೆ. ಈ ದುರ್ಘಟನೆಯಿಂದ ನೊಂದವರಿಗೆ ನನ್ನ ಸಾಂತ್ವನಗಳು. ವಿಷಾನಿಲದ ಆಘಾತಕ್ಕೆ ಸಿಲುಕಿ ತೊಂದರೆಗೆ, ಅನಾರೋಗ್ಯಕ್ಕೆ ಈಡಾಗಿರುವವರು ಮತ್ತು ಗಾಯಗೊಂಡಿರುವವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.

ಈ ಘಟನೆ ಸಂಭವಿಸಿದ ಪ್ರದೇಶದಲ್ಲಿ ನಮ್ಮ ಕರ್ನಾಟಕ ರಾಜ್ಯದಿಂದ ತೆರಳಿದವರು ಯಾರಾದರೂ ಸಿಲುಕಿಕೊಂಡಿದ್ದಾರೆಯೇ ಎಂದು ಪತ್ತೆ ಮಾಡಬೇಕಿದೆ. ಅವರಿಗೆ ತಕ್ಷಣಕ್ಕೆ ಸೂಕ್ತ ಮಾಹಿತಿ - ಸಹಾಯ ಒದಗಿಸುವ ಕೆಲಸವಾಗಬೇಕಿದೆ. ಈ ನಿಟ್ಟಿನಲ್ಲಿ ರಾಯಚೂರು ಜಿಲ್ಲಾಡಳಿತದ ಮೂಲಕ ಸಹಾಯವಾಣಿ ಪ್ರಾರಂಭಿಸಲಾಗಿದೆ ಎಂದಿದ್ದಾರೆ.

ಈ ಸಹಾಯವಾಣಿಯ ನಂಬರ್  08532-228559 ಮತ್ತು 8660761866 ಆಗಿದ್ದು, ಸಂತ್ರಸ್ತರು ಇದರ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ ಎಂದಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ನೀರಿನ ವಿಚಾರದಲ್ಲಿ ರಾಜಕೀಯ : ಜಾರಕಿಹೊಳಿ ಹೇಳಿದ್ದೇನು?