Publish Date: Thu, 04 Jul 2019 (16:04 IST)
Updated Date: Thu, 04 Jul 2019 (16:05 IST)
ಮಾಜಿ ಸಿಎಂ ಹಾಗೂ ಮೈತ್ರಿ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಎವರ್ ಗ್ರೀನ್ ಸಿಎಂ ಅಂತೆ. ಹೀಗಂದವನಿಗೆ ಸಿದ್ದರಾಮಯ್ಯ ಮಾಡಿದ್ದೇನು?
ಮೈಸೂರಿನಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತ ಸಭೆಯಲ್ಲಿ ಪಾಲ್ಗೊಳ್ಳುವುದಕ್ಕಾಗಿ ಸಿದ್ದರಾಮಯ್ಯ ಖಾಸಗಿ ಹೊಟೆಲ್ ಗೆ ಆಗಮಿಸಿದ್ದರು. ಆ ಸಂದರ್ಭದಲ್ಲಿ ಸಿದ್ದರಾಮಯ್ಯನವರ ಅಭಿಮಾನಿಯೊಬ್ಬ ಸಿದ್ದರಾಮಯ್ಯರ ಪರ ಘೋಷಣೆ ಕೂಗಿದ. ಅಷ್ಟೇ ಅಲ್ಲ, ಅಣ್ಣಾ ನೀವು ಎವರ್ ಗ್ರೀನ್ ಎಂದು ಹೊಗಳಿದೆ.
ಅಭಿಮಾನಿಯ ಮಾತು ಕೇಳಿಸಿಕೊಂಡ ಸಿದ್ದರಾಮಯ್ಯ, ಹೋಗೋ ಮೂದೇವಿ ಅಂತ ತಮ್ಮ ಅಭಿಮಾನಿಯ ಕೆನ್ನೆಯನ್ನು ಪ್ರೀತಿಯಿಂದ ತಟ್ಟಿ ಖುಷಿಪಡಿಸಿದ್ರು.
ಮಾಜಿ ಸಿಎಂ ಸಿದ್ದರಾಮಯ್ಯನವರನ್ನು ಕಂಡ ಅಭಿಮಾನಿ ಅವರನ್ನು ಎವರ್ ಗ್ರೀನ್ ಸಿಎಂ ಅಂತ ಕರೆದು ಅಭಿಮಾನ ತೋರಿದ್ದಾನೆ.