ಫೇಲ್ ಆಗಿದ್ದಕ್ಕೆ ವಿದ್ಯಾರ್ಥಿಯೊಬ್ಬ ವಿವಿಗೆ ನುಗ್ಗಿ ಮಾಡಿದ್ದೇನು ಗೊತ್ತಾ?

ಸೋಮವಾರ, 13 ಜನವರಿ 2020 (10:32 IST)
ಬೆಳಗಾವಿ : ಫೇಲ್ ಆಗಿದ್ದಕ್ಕೆ ವಿದ್ಯಾರ್ಥಿಯೊಬ್ಬ ವಿವಿಗೆ ನುಗ್ಗಿ ಅಂಕಪಟ್ಟಿ ಕಳ್ಳತನಕ್ಕೆ ಯತ್ನಿಸಿದ ಘಟನೆ ಬೆಳಗಾವಿ ತಾಲೂಕಿನ ಭೂತರಾಮನಹಟ್ಟಿಯಲ್ಲಿರುವ ರಾಣಿ ಚನ್ನಮ್ಮ ವಿವಿಯಲ್ಲಿ ನಡೆದಿದೆ.ಬಸಪ್ಪ ಹೊನವಾಡ (23) ಅಂಕಪಟ್ಟಿ ಕಳ್ಳತನಕ್ಕೆ ಯತ್ನಿಸಿದ ವಿದ್ಯಾರ್ಥಿ. ಹಲವು ಪರೀಕ್ಷೆಯಲ್ಲಿ ಫೇಲಾಗಿ ಹತಾಶೆಗೊಂಡ ಈತ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಕೆಗೆ ವಿವಿಗೆ ಆಗಮಿಸಿದ ವೇಳೆ ಬೇರೆ ವಿದ್ಯಾರ್ಥಿಗಳ ಅಂಕಪಟ್ಟಿ ಕಳ್ಳತನಕ್ಕೆ ಯತ್ನಿಸಿದ್ದಾನೆ. ಆಗ ಇದನ್ನು ಕಂಡ ಭದ್ರತಾ ಸಿಬ್ಬಂದಿ ಆತನನನ್ನು ಹಿಡಿದು ಕಾಕತಿ ಪೊಲೀಸರಿಗೆ ಒಪ್ಪಿಸಿದ್ದಾನೆ.


ಈ ಬಗ್ಗೆ ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿದ್ಯಾರ್ಥಿಯನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಬೆಂಗಳೂರಿನಲ್ಲಿ ಸ್ವಚ್ಚತೆ ಕಾಪಾಡಲು ಬಿಬಿಎಂಪಿ ಹೊಸ ಪ್ಲ್ಯಾನ್