ಬೆಳಗಾವಿ ಪಾಲಿಕೆ ಆಯುಕ್ತರ ವಿರುದ್ಧ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಗರಂ ಆಗಿದ್ದೇಕೆ?

ಶನಿವಾರ, 28 ಡಿಸೆಂಬರ್ 2019 (10:28 IST)
ಬೆಳಗಾವಿ : ಬೆಳಗಾವಿ ಪಾಲಿಕೆ ಆಯುಕ್ತರ ವಿರುದ್ಧ ಬೆಳಗಾವಿ ಗ್ರಾಮಾಂತರ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಗರಂ ಆಗಿದ್ದಾರೆ.ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಕಸ ವಿಲೇವಾರಿ ಘಟಕ ವಿಸ್ತರಣೆ ವಿರೋಧಿಸಿ ತುರಮರಿ ಬಳಿ ಪ್ರತಿಭಟನೆ ನಡೆಸುತ್ತಿದ್ದರು. ಆದರೆ ಕಸ ವಿಲೇವಾರಿ ಘಟಕ ವಿಸ್ತರಣೆ ಸಂಬಂಧ ಅಭಿಪ್ರಾಯ ಸಂಗ್ರಹಿಸುವುದಕ್ಕೆ ಅಧಿಕಾರಿಗಳು ಮಾಜಿ ಶಾಸಕ ಸಂಜಯ್ ಪಾಟೀಲ್ ಜೊತೆ ಸಭೆಗೆ ತೆರಳಿದ್ದರು. ಇದರಿಂದ ಕೋಪಗೊಂಡ ಶಾಸಕಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.


‘ಓರ್ವ ಶಾಸಕಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಇಲ್ಲೇ ಸಾಯ್ತಿದ್ದೇವೆ. ನಾವು ಇಲ್ಲಿ ಪ್ರತಿಭಟನೆ ಮಾಡುತ್ತಿರುವುದು ನಿಮಗೆ ಕಾಣ್ತಿಲ್ವಾ. ನೀವು ಪ್ರತಿಭಟನಾ ಸ್ಥಳಕ್ಕೆ ಬರಬೇಕಾ, ಸಭೆಗೆ ಹೋಗಬೇಕಾ? ಆಯುಕ್ತರಾಗಿ ಹೀಗೆ ಮಾಡಲು ನಿಮಗೆ ನಾಚಿಕೆ ಆಗಲ್ವಾ ಸರ್. ಅಧಿಕಾರಿಯಾಗಿ ನಮ್ಮಿಂದ ನೀವು ಹೀಗೆಲ್ಲಾ ಹೇಳಿಸಿಕೊಳ್ಳಬೇಕಾ? ಅಧಿಕಾರಿಗಳಾದ ನಿಮಗೆ ನಾವು ಮರ್ಯಾದೆ ಕೊಡುತ್ತೇವೆ. ಆದರೆ ನಿಮ್ಮ ನಡೆಯಿಂದ ನಮಗೆ ಸಂಕಟವಾಗ್ತಿದೆ ಎಂದು ಗರಂ ಆಗಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಹೈಕಮಾಂಡ್ ಮುಂದೆ ವಿಪಕ್ಷ ನಾಯಕನ ಸ್ಥಾನಕ್ಕೆ ಪರಮೇಶ್ವರ್ ಮನವಿ