ರಮೇಶ್ ಜಾರಕಿಹೊಳಿ ಹೇಳಿಕೆಗೆ ಲಕ್ಷ್ಮೀ ಹೆಬ್ಬಾಳ್ಕರ್ ತಿರುಗೇಟು

ಮಂಗಳವಾರ, 31 ಡಿಸೆಂಬರ್ 2019 (10:46 IST)
ಬೆಳಗಾವಿ: ಬೆಳಗಾವಿ ತಾಲೂಕು ರಿಪಬ್ಲಿಕ್ ಆಫ್ ಗೋಕಾಕ್ ಆಗಲ್ಲ ,ರಿಪಬ್ಲಿಕ್ ಆಫ್ ಗೋಕಾಕ್ ಮಾಡಲು ಅವಕಾಶ ಕೊಡಲ್ಲ. ಎಂದು ರಮೇಶ್ ಜಾರಕಿಹೊಳಿ ಹೇಳಿಕೆಗೆ ಲಕ್ಷ್ಮೀ ಹೆಬ್ಬಾಳ್ಕರ್ ತಿರುಗೇಟು ನೀಡಿದ್ದಾರೆ.ಬೆಳಗಾವಿ ಗ್ರಾಮೀಣ ಕ್ಷೇತ್ರ ಮರಾಠಿಗರ ಹಕ್ಕು ಎಂದಿದ್ದ ರಮೇಶ್ ಜಾರಕಿಹೊಳಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಟಾಂಗ್ ಕೊಟ್ಟ ಹೆಬ್ಬಾಳ್ಕರ್, ಮಹಾರಾಷ್ಟ್ರದ ಚಂದಗಡದಲ್ಲಿ ರಮೇಶ್ ಜಾರಕಿಹೊಳಿ ಅಳಿಯ  ಅಪ್ಪಿರಾವ್ ಸ್ಪರ್ಧೆ ಮಾಡಿದ ಹಿನ್ನಲೆ ಚಂದಗಡ ಕ್ಷೇತ್ರದಲ್ಲಿ ಮಾರಾಠಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದರು, ಆಗ ಮರಾಠಿಗರು ನೆನಪಾಗಲಿಲ್ವೇ ಅಂತಾ ಹೆಬ್ಬಾಳ್ಕರ್ ರಮೇಶ್ ಜಾರಕಿಹೊಳಿ ಅವರನ್ನು  ಪ್ರಶ್ನಿಸಿದ್ದಾರೆ.


ಅಲ್ಲದೇ 5 ಕೋಟಿ ನೀಡುವುದಾಗಿ ಹೇಳಿದ್ದ ರಮೇಶ್ ಗೆ ತಿರುಗೇಟು ನೀಡಿದ ಅವರು, ಮರಾಠಿಗರು ಸ್ಪರ್ಧಿಸಿದ್ರೆ ಹಣ ನೀಡುವುದಾಗಿ ಹೇಳಿದ್ದರು. ಐಟಿ, ಇಡಿ ಪ್ರಶ್ನಿಸಲಿಲ್ಲವೇ ಅಂತಾ ಪ್ರಶ್ನಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಮಂತ್ರಿಗಿರಿಗಾಗಿ ಮತ್ತೆ ಕಸರತ್ತು ನಡೆಸಿದ ಉಮೇಶ್ ಕತ್ತಿ