Select Your Language

Notifications

webdunia
webdunia
webdunia
webdunia

ಮಂತ್ರಿಗಿರಿಗಾಗಿ ಮತ್ತೆ ಕಸರತ್ತು ನಡೆಸಿದ ಉಮೇಶ್ ಕತ್ತಿ

ಬೆಂಗಳೂರು
ಬೆಂಗಳೂರು : ಸಂಪುಟ ವಿಸ್ತರಣೆಯ ವೇಳೆ ಸಚಿವ ಸ್ಥಾನ ನೀಡುವಂತೆ ಶಾಸಕರು ಮತ್ತೆ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ  ಒತ್ತಡ ಹೇರುತ್ತಿದ್ದಾರೆ. 



ಹೌದು. ಮಂತ್ರಿಗಿರಿಗಾಗಿ ಪದೇ ಪದೇ ಸಿಎಂ ಬಿಎಸ್ ವೈರನ್ನ ಭೇಟಿಯಾಗ್ತಿರುವ ಉಮೇಶ್ ಕತ್ತಿ ಇದೀಗ ಮತ್ತೆ ಇಂದು ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಸಿಎಂ ನಿವಾಸಕ್ಕೆ ಆಗಮಿಸಿ ಬಿಎಸ್ ವೈ ಜೊತೆ ಚರ್ಚೆ ನಡೆಸಿದ್ದಾರೆ. ಸಿಎಂ ಜತೆ ವಾಕಿಂಗ್ ಗೆ ತೆರಳಿದ ಉಮೇಶ್ ಕತ್ತಿ ಸಂಪುಟ ವಿಸ್ತರಣೆ ವೇಳೆ ಸಚಿವ ಸ್ಥಾನ ಕೊಡುವಂತೆ ಸಿಎಂಗೆ ಒತ್ತಡ ಹೇರಿದ್ದಾರೆ ಎನ್ನಲಾಗಿದೆ.


ಹಾಗೇ ಸಿಎಂ ಬಿಎಸ್ ವೈ ಯ ಧವಳಗಿರಿ ನಿವಾಸಕ್ಕೆ ಮಾಜಿ ಶಾಸಕ ಆರ್.ಶಂಕರ್ ಭೇಟಿ ನೀಡಿದ್ದು,  ಎಂಎಲ್ ಸಿ ಮಾಡಿ ಮಂತ್ರಿ ಮಾಡೋದಾಗಿ ಸಿಎಂ ಹೇಳಿದ್ದ ಹಿನ್ನಲೆಯಲ್ಲಿ ಇದೇ ಕಾರಣಕ್ಕೆ ಸಿಎಂ ಜತೆ ಆರ್.ಶಂಕರ್ ಚರ್ಚೆ ನಡೆಸಿದ್ದಾರೆ. ಹಾಗೇ ಯಡಿಯೂರಪ್ಪ ನಿವಾಸಕ್ಕೆ ಎಂಟಿಬಿ ನಾಗರಾಜ್ ಕೂಡ ಭೇಟಿ ನೀಡಿದ್ದಾರೆ ಎನ್ನಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ನವದಂಪತಿ ಶುಭದ ಸಂಕೇತವಾಗಿ ಪಾರಿವಾಳಗಳನ್ನು ಹಾರಿಸುವಾಗ ನಡೆದಿದೆ ಈ ಅಶುಭ