Publish Date: Mon, 26 Aug 2019 (17:17 IST)
Updated Date: Mon, 26 Aug 2019 (17:19 IST)
ಕಾಂಗ್ರೆಸ್ ಸರಕಾರದ ಬಳಿಕ ಮೈತ್ರಿ ಆಡಳಿತ ವೇಳೆ ಇಂದಿರಾ ಕ್ಯಾಂಟೀನ್ ಗಳ ಮೇಲೆ ಅಸಮಧಾನ ಹೊಂದಿದ್ದ ಸಿಎಂ ಯಡಿಯೂರಪ್ಪ ಈಗ ಈ ಆದೇಶ ನೀಡಿದ್ದಾರೆ.
ರಾಜ್ಯದಲ್ಲಿರುವ ಇಂದಿರಾ ಕ್ಯಾಂಟೀನ್ ಗಳ ಸಬ್ಬಿಸಿ ಹಣವನ್ನು ಗುಳುಂ ಮಾಡಿ ಲಪಟಾಯಿಸಲಾಗಿದೆ ಎಂಬೆಲ್ಲ ಆರೋಪಗಳು ಈ ಮೊದಲಿನಿಂದ ಕೇಳಿಬರುತ್ತಿದ್ದವು.
ಇಂದಿರಾ ಕ್ಯಾಂಟಿನ್ ಗಳ ಸಬ್ಸಿಡಿ ಹಣದ ದುರುಪಯೋಗ ಕುರಿತು ಆಕ್ರೋಶಗೊಂಡಿರೋ ಸಿಎಂ ಬಿ.ಎಸ್.ಯಡಿಯೂರಪ್ಪ, ತನಿಖೆಗೆ ಆದೇಶ ಹೊರಡಿಸಿದ್ದಾರೆ.
ಸಬ್ಸಿಡಿ ಹಣ ದುರುಪಯೋಗ ಬಗ್ಗೆ ತನಿಖೆ ನಡೆಸಿ ಶೀಘ್ರ ವರದಿ ಸಲ್ಲಿಸುವಂತೆ ಆದೇಶ ನೀಡಿದ್ದಾರೆ.
ಕ್ಯಾಂಟೀನ್ ನಡೆಸುತ್ತಿರೋ ಸಂಸ್ಥೆಗಳಲ್ಲದೇ ಗುತ್ತಿಗೆ ನೀಡಿರೋ ಸಂಸ್ಥೆಗಳು ತನಿಖೆಗೆ ಒಳಗಾಗಲಿವೆ.