Select Your Language

Notifications

webdunia
webdunia
webdunia
webdunia

ಪ್ರೇಯಸಿ ತೆಕ್ಕೆಗೆ ಜಾರಿದ ಗಂಡನ ಕಥೆ ಮುಗಿಸಿದ ಹೆಂಡತಿ

ಪ್ರೇಯಸಿ ತೆಕ್ಕೆಗೆ ಜಾರಿದ ಗಂಡನ ಕಥೆ ಮುಗಿಸಿದ ಹೆಂಡತಿ
ಮುಂಬೈ , ಗುರುವಾರ, 22 ಆಗಸ್ಟ್ 2019 (17:57 IST)

ತನ್ನ ಗಂಡ ಬೇರೆ ಯುವತಿಯ ತೆಕ್ಕೆಗೆ ಜಾರಿದ್ದನ್ನು ಸಹಿಸದ ಗೃಹಿಣಿಯೊಬ್ಬಳು ಗಂಡನನ್ನೇ ಭೀಕರವಾಗಿ ಕೊಲೆ ಮಾಡಿ ಆತ್ಮಹತ್ಯೆ ಎಂದು ಕಥೆ ಕಟ್ಟಿ ಕೊನೆಗೆ ಕಂಬಿ ಎಣಿಸುವಂತಾಗಿದೆ.

ಎಂಟು ವರ್ಷಗಳ ಹಿಂದೆ ಸುನೀಲ್ ಹಾಗೂ ಪ್ರಣಾಲಿ ಪ್ರೀತಿಸಿ ಮದುವೆಯಾಗಿದ್ದರು. ಇವರಿಗೆ ಮುದ್ದಾದ ಇಬ್ಬರು ಮಕ್ಕಳಿದ್ದಾರೆ. ತಂದೆ-ತಾಯಿ ಜೊತೆಗೆ ಇದ್ದ ತುಂಬು ಕುಟುಂಬ ಇವರದ್ದಾಗಿತ್ತು.

ಆದರೆ ಗಂಡನ ಪಾಲಿಗೆ ಹೆಂಡತಿಯೇ ಯಮರೂಪಿಯಾಗೋಕೆ ಕಾರಣ ಗಂಡನ ಅನೈತಿಕ ಸಂಬಂಧ. ತನ್ನ ಗಂಡ ಬೇರೊಬ್ಬಳ ಜತೆ ಲವ್ವಿ ಡವ್ವಿ ನಡೆಸುತ್ತಿರೋ ವಿಚಾರ ಪ್ರಣಾಲಿಗೆ ತಿಳಿದಿದ್ದೇ ತಡ ಈ ಕುರಿತು ಹಲವು ಬಾರಿ ಗಂಡನಿಗೆ ವಾರ್ನಿಂಗ್ ಮಾಡಿದ್ದಾಳೆ.

ಆದರೆ ಹೆಂಡತಿ ಮಾತು ಕೇಳದ ಗಂಡ ಸುನೀಲ್ ನನ್ನು ಜಗಳ ತಾರಕಕ್ಕೇರಿದಾಗ ಪ್ರಣಾಲಿ ಚಾಕುವಿನಿಂದ ತಿವಿದು ಕೊಲೆ ಮಾಡಿದ್ದಾಳೆ.

ಆ ಬಳಿಕ ಗಂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅಂತ ರೀಲ್ ಬಿಟ್ಟಿದ್ದಳು. ಆದರೆ ಪೊಲೀಸ್ ತನಿಖೆಯಲ್ಲಿ ಗಂಡನನ್ನು ಕೊಲೆ ಮಾಡಿರೋದಾಗಿ ಪ್ರಣಾಲಿ ತಪ್ಪೊಪ್ಪಿಕೊಂಡಿದ್ದಾಳೆ.

ಮುಂಬೈನ ನಲಸೋಪರದ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ನೆರೆ ಸಂತ್ರಸ್ತರಿಗೆ ಬಿಇಎಲ್ ಉ.ಕ ಬಳಗದಿಂದ ವಿಭಿನ್ನ ರೀತಿಯ ನೆರವು