ಬೆಂಗಳೂರು: ಮನೆಗೆಲಸದಾಕೆ ಮೇಲೆ ಅತ್ಯಾಚಾರವೆಸಗಿದ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ದೋಷಿ ಎಂದು ಸಾಬೀತಾಗಿದ್ದು ಇಂದು ಶಿಕ್ಷೆ ಪ್ರಮಾಣ ಘೋಷಣೆಯಾಗಲಿದೆ. ಬಳಿಕ ಅವರ ಮುಂದಿರುವ ಆಯ್ಕೆಗಳೇನು?
55 ರ ಮನೆಗೆಲಸದಾಕೆ ಮೇಲೆ ಅತ್ಯಾಚಾರವೆಸಗಿದ್ದಲ್ಲದೆ ಪ್ರಜ್ವಲ್ ವಿಡಿಯೋ ಮಾಡಿಕೊಂಡಿದ್ದರು. ಇದುವೇ ನ್ಯಾಯಾಲಯಕ್ಕೆ ಪ್ರಮುಖ ಸಾಕ್ಷ್ಯವಾಯಿತು. ಅಲ್ಲದೆ ಮಹಿಳೆಯ ಬಟ್ಟೆಯನ್ನು ಪ್ರಜ್ವಲ್ ರ ಬಸವನಗುಡಿ ಮನೆಯಿಂದ ವಶಕ್ಕೆ ಪಡೆಯಲಾಗಿತ್ತು. ಇದೆಲ್ಲವೂ ಪ್ರಜ್ವಲ್ ಗೆ ಮುಳುವಾಗಿತ್ತು.
ಇಂದು ಜನಪ್ರತಿನಿಧಿಗಳ ಕೋರ್ಟ್ ಪ್ರಜ್ವಲ್ ರೇವಣ್ಣ ಶಿಕ್ಷೆ ಪ್ರಮಾಣ ಘೋಷಣೆ ಮಾಡಿದ ಬಳಿಕ ಪ್ರಜ್ವಲ್ ಮುಂದೆ ಹಲವು ಆಯ್ಕೆಗಳಿರುತ್ತವೆ. ತನ್ನ ವಿರುದ್ಧ ಬಂದಿರುವ ಶಿಕ್ಷೆಯನ್ನು ಅಮಾನತಿನಲ್ಲಿಟ್ಟು ಜಾಮೀನು ನೀಡಬೇಕೆಂದು ಹೈಕೋರ್ಟ್ ಮೊರೆ ಹೋಗಬಹುದು.
ಒಂದು ವೇಳೆ ಹೈಕೋರ್ಟ್ ನಲ್ಲಿ ಇದಕ್ಕೆ ಮನ್ನಣೆ ಸಿಗದೇ ಇದ್ದರೆ ಸುಪ್ರೀಂಕೋರ್ಟ್ ಗೆ ಮನವಿ ಸಲ್ಲಿಸಬಹುದು. ಸುಪ್ರೀಂಕೋರ್ಟ್ ನಲ್ಲೂ ಕೆಳ ಹಂತದ ತೀರ್ಪು ಸರಿ ಎಂದಾದರೆ ಪ್ರಜ್ವಲ್ ಗೆ ಬೇರೆ ಆಯ್ಕೆಗಳಿರುವುದಿಲ್ಲ. ಜನಪ್ರತಿನಿಧಿಗಳ ಕೋರ್ಟ್ ಹೇಳಿದಂತೆ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.