Select Your Language

Notifications

webdunia
webdunia
webdunia
webdunia

ಪುನೀತ್​​​​ ಪತ್ನಿ ಅಶ್ವಿನಿಗೆ ಪ್ರಶಸ್ತಿ ಹಸ್ತಾಂತರ ಮಾಡ್ತೇವೆ-ಆರ್​​​. ಅಶೋಕ್

We will hand over the award to Puneeth's wife Ashwini
bangalore , ಸೋಮವಾರ, 31 ಅಕ್ಟೋಬರ್ 2022 (20:31 IST)
ಕರ್ನಾಟಕದ ಪ್ರತಿಷ್ಠಿತ ಪ್ರಶಸ್ತಿ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಾಳೆ 4 ಗಂಟೆಗೆ ಆರಂಭವಾಗಲಿದೆ. ಪುನೀತ್​ ರಾಜ್​​ಕುಮಾರ್​​ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಲಾಗ್ತಿದ್ದು, ಅಪ್ಪು ಪತ್ನಿ ಅಶ್ವಿನಿಗೆ ಪ್ರಶಸ್ತಿ ನೀಡಲಿದ್ದೇವೆ. ಸಿಎಂ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. ನಟ ರಜನೀಕಾಂತ್, ಜೂನಿಯರ್ NTR ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ ಎಂದು ಬೆಂಗಳೂರಿನಲ್ಲಿ ಕಂದಾಯ ಸಚಿವ ಆರ್​​​. ಅಶೋಕ್​​​ ಹೇಳಿದ್ದಾರೆ. ರಾಜಕುಮಾರ್​​ ಕುಟುಂಬದ ಜೊತೆ ನಮಗೆ ಅವಿನಾಭಾವ ಸಂಬಂಧ ಇದೆ.
ನಾಳೆ ವಿಜಯ್ ಪ್ರಕಾಶ್ ಹಾಡಿನ ಕಾರ್ಯಕ್ರಮ ಆಯೋಜಿಸಲಾಗಿದೆ. ಎಲ್ಲರಿಗೂ ಮುಕ್ತ ಆಹ್ವಾನ ಇದೆ. ಕಾರ್ಯಕ್ರಮ ಯಶಸ್ವಿಯಾಗಬೇಕು ಎಂದ್ರು. ಪುನೀತ್ ತೀರಿಹೋಗಿ ಒಂದು ವರ್ಷವಾದ್ರೂ, ಅವರ ಮೇಲಿನ ಅಭಿಮಾನ ಕಡಿಮೆಯಾಗಿಲ್ಲ. ಅವರ ಸಮಾಧಿಗೆ ಸಾವಿರಾರು ಜನ ಬಂದು ಹೋಗ್ತಿದ್ದಾರೆ. ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡ್ತಿರೋದಕ್ಕೆ ಹೆಮ್ಮೆ ಇದೆ. ಈ ಪ್ರಶಸ್ತಿ ಗೌರವ ರೂಪದಲ್ಲಿ ನೀಡಲಾಗುತ್ತದೆ ಎಂದು ತಿಳಿಸಿದರು. 

Share this Story:

Follow Webdunia kannada

ಮುಂದಿನ ಸುದ್ದಿ

ತನಿಖೆ ನಡೆಯುತ್ತಿದೆ-ಸತ್ಯ ಹೊರಬರಲಿದೆ