Select Your Language

Notifications

webdunia
webdunia
webdunia
Monday, 7 April 2025
webdunia

ಮಕ್ಕಳೊಂದಿಗೆ ಡ್ಯಾಂಗೆ ಹಾರಿ ತಾಯಿ ಆತ್ಮಹತ್ಯೆ

Mother commits suicide with dengue along with children
ಚಿತ್ರದುರ್ಗ , ಸೋಮವಾರ, 31 ಅಕ್ಟೋಬರ್ 2022 (17:54 IST)
ಮದ್ಯಪಾನಕ್ಕೆ ದಾಸನಾಗಿದ್ದ ಪತಿ ಪತ್ನಿಗೆ ಕಿರುಕುಳ ನೀಡುತ್ತಿದ್ದ. ಗಂಡನ ಟಾರ್ಚರ್ ತಾಳಲಾರದೆ ಹೆಂಡ್ತಿ ತನ್ನ ಇಬ್ಬರು ಮಕ್ಕಳೊಂದಿಗೆ ಚೆಕ್ ಡ್ಯಾಂಗೆ ಹಾರಿ ಆತ್ಮಹತ್ಯೆಗೆ ಶರಣಾಗಿರೋ ಘಟನೆ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಮಳಲಿ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಜಾನಕಲ್ ಲಂಬಾಣಿ ಹಟ್ಟಿಯ ಅರ್ಪಿತಾ, ಮಗಳು ಮಾನಸ, ಮಗ ಮದನ್ ಮೃತಪಟ್ಟಿದ್ದಾರೆ. ಕಳೆದ 8 ವರ್ಷದ ಹಿಂದೆ ಹೊಸದುರ್ಗ ತಾಲೂಕಿನ ಜಾನಕಲ್ ಲಂಬಾಣಿಹಟ್ಟಿಯ ಅರ್ಪಿತಾಳನ್ನು ಕೊಂಡಜ್ಜಿ ಲಂಬಾಣಿಹಟ್ಟಿಯ ಮಂಜಾನಾಯ್ಕ್ ಮದುವೆಯಾಗಿದ್ದು, ಪತ್ನಿ ಮೇಲೆ ಅನುಮಾನ ಪಡುತ್ತಿದ್ದನು. ಅಲ್ಲದೇ ನಿತ್ಯ ಮದ್ಯಪಾನ ಮಾಡಿ ಮನೆಗೆ ಬಂದು ಟಾರ್ಚರ್ ನೀಡುತ್ತಾ ಹಲ್ಲೆ ನಡೆಸುತ್ತಿದ್ದನಂತೆ. ಈ ಕಿರುಕುಳದಿಂದ ಮನನೊಂದ ಅರ್ಪಿತಾ ತನ್ನ ಇಬ್ಬರು ಮಕ್ಕಳೊಂದಿಗೆ ಚೆಕ್ ಡ್ಯಾಂಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೂ ಮುನ್ನ ಅರ್ಪಿತಾ, ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸೆಲ್ಫಿ ವಿಡಿಯೋ ವೇಳೆ ಅಪ್ಪ ಎಂದು ಕೂಗಿರುವ ಪುಟ್ಟ ಬಾಲಕ ಮದನ್‍ನ ಮನಕಲಕುವ ಸೆಲ್ಫಿ ವಿಡಿಯೋ ವೈರಲ್ ಆಗಿದೆ. ಈ ಸಂಬಂಧ ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ನೇಹಿತರ ಕಿರಿಕ್​ ಕೊಲೆಯಲ್ಲಿ ಅಂತ್ಯ