Publish Date: Mon, 31 Oct 2022 (17:50 IST)
Updated Date: Mon, 31 Oct 2022 (17:53 IST)
ಪ್ರಾಣ ಸ್ನೇಹಿತರು ಅಂದ್ರೆ ಏಲ್ಲಾ ಟೈಂನಲ್ಲೂ ಒಟ್ಟಿಗೆ ಇರ್ತಾರೆ. ಸಣ್ಣ ಪುಟ್ಟ ಗಲಾಟೆ ಬಂದ್ರೂ ಮರುದಿನ ಒಟ್ಟಿಗೆ ಓಡಾಡ್ತಾರೆ. ಆದರೆ ಬೆಂಗಳೂರಿನ ಇಬ್ಬರು ಸ್ನೇಹಿತರ ನಡುವಿನ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಕ್ಷುಲ್ಲಕ ಕಾರಣಕ್ಕೆ ಇಬ್ಬರು ಸ್ನೇಹಿತರ ನಡುವೆ ಗಲಾಟೆ ಆರಂಭವಾಗಿದೆ. ಗಲಾಟೆ ತಾರಕಕ್ಕೆ ಹೋಗಿದ್ದು, ಸೈಯದ್ ಎಂಬ ವ್ಯಕ್ತಿ ತನ್ನ ಸ್ನೇಹಿತ ಸಫೀರ್ ಅಹ್ಮದ್ಗೆ ಚಾಕುವಿನಿಂದ ಚುಚ್ಚಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಸಫೀರ್ ಅಸುನೀಗಿದ್ದಾನೆ. ಬೆಂಗಳೂರಿನ ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ಸಂಜೆ ಈ ಘಟನೆ ನಡೆದಿದೆ. ಇಬ್ಬರೂ ಸಹ ವೆಲ್ಡಿಂಗ್ ಕೆಲಸ ಮಾಡಿಕೊಂಡಿದ್ರು. ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ