Select Your Language

Notifications

webdunia
webdunia
webdunia
webdunia

ಈ ಬಾರಿ ಸಿದ್ದುಗೆ ಟಿಕೆಟ್​​ ಸಿಗಲ್ಲ- ಕಟೀಲ್​​​

This time Siddhu will not get a ticket
bangalore , ಸೋಮವಾರ, 31 ಅಕ್ಟೋಬರ್ 2022 (17:04 IST)
ಕಾಂಗ್ರೆಸ್​​ನಲ್ಲಿ ಈ ಸಾರಿ ಸಿದ್ದರಾಮಯ್ಯಗೆ ಖಂಡಿತವಾಗಿಯೂ ಟಿಕೆಟ್ ಕೊಡಲ್ಲ. ಖರ್ಗೆ ಅವರು ಸ್ವಾಭಿಮಾನಿ ನಾಯಕ ಅಂತಂದ್ರೆ ಸಿದ್ದರಾಮಯ್ಯರನ್ನ ರಾಜಕೀಯವಾಗಿ ಮುಗಿಸ್ತಾರೆ ಎಂದು BJP ರಾಜ್ಯಾಧ್ಯಕ್ಷ ನಳೀನ್​​ ಕುಮಾರ್​​ ಕಟೀಲ್​​​ ಹೇಳಿದ್ರು. ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯರ ಭಯ BJPಗೆ ಇಲ್ಲ. ಅವರು ಇದ್ರೆ ನಮಗೆ ಬಹಳ ಖುಷಿ. ಬಿಜೆಪಿ ಹೆಚ್ಚು ವೋಟ್ ಬರುವುದೇ ಸಿದ್ದರಾಮಯ್ಯ ಮಾತಿನಿಂದ ಹಾಗೂ ಎಲ್ಲಿಯವರೆಗೆ ರಾಹುಲ್ ಇರ್ತಾರೋ ಅಲ್ಲಿಯವರೆಗೆ ಕೇಂದ್ರದಲ್ಲಿ BJP ಇರುತ್ತೆ, ಹಾಗೆಯೇ ಎಲ್ಲಿಯವರೆಗೆ ಕಾಂಗ್ರೆಸ್​​ನಲ್ಲಿ ಸಿದ್ದರಾಮಯ್ಯ ಇರ್ತಾರೋ ಅಲ್ಲಿಯವರೆಗೆ ರಾಜ್ಯದಲ್ಲಿ BJP ಗೆಲ್ಲುತ್ತೆ ಎಂದ್ರು. ಕಳೆದ ಬಾರಿ ಅಧಿಕಾರದಲ್ಲಿದ್ರೂ ಸಹ ಸಿದ್ದರಾಮಯ್ಯ ಚಾಮುಂಡಿ ಕ್ಷೇತ್ರದಲ್ಲಿ ಸೋಲುಂಡ್ರು. ಸಿದ್ದರಾಮಯ್ಯ ಜೊತೆಗೆ ರಾಜ್ಯದ ಜನರಿಲ್ಲ. ಬಾದಾಮಿಯಲ್ಲೂ ನಿಲ್ಲುವ ಪರಿಸ್ಥಿತಿ ಅವರಿಗೆ ಇಲ್ಲ. ಮಾಜಿ ಸಿಎಂ ಆಗಿ ಇಂದು ಕ್ಷೇತ್ರ ಹುಡುಕಾಡ್ತಾ ಇದ್ದಾರೆ ಎಂದು ಕಟೀಲ್​​ ಲೇವಡಿ ಮಾಡಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಒಂದು ತಿಂಗಳಿಗೆ 23 ಸಾವಿರ ರೂ. ಕರೆಂಟ್​​ ಶಾಕ್​​..!